ಬಸ್ ಮರಕ್ಕೆ ಡಿಕ್ಕಿ : ಪ್ರಯಾಣಿಕರು ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ರಾತ್ರಿ ಸುರಿದ ತುಂತುರು ಮಳೆಗೆ ನಿಯಂತ್ರಣ ತಪ್ಪಿದ ಕೆ ಎಸ್ ಆರ್ ಟಿ ಸಿ ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಹತ್ತಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ಪೆÇಯಿನಾಚಿ 55ನೇ ಮೈಲಿನಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಎಂ ವಿ ಬಾಲಕೃಷ್ಣನರ ಪುತ್ರಿ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಿಕೆಯಾಗಿರುವ ಕ್ಲಾಯಿಕಾಡ್ ನಾಪ್ಪಚ್ಚಾಲಿನ ಪ್ರತಿಭಾ (36), ಅದೇ ಶಾಲೆಯ ಅಧ್ಯಾಪಿಕೆಯರಾದ ನಾಪ್ಪಚ್ಚಾಲಿನ ಅರ್ಚನ (34), ಹೊಸದುರ್ಗದ ಪ್ರಸೀನಾ (34), ಬಸ್ ಚಾಲಕ ಕಲ್ಲಿಕೋಟೆ ತಿರುವಲ್ಲಾ ನಿವಾಸಿ ಡಿಮಿಟ್ ಥೋಮಸ್ (40), ಚೀಮೇನಿಯ ಪಿ ವಿ ಮೋಹನನ್ (52), ತಳಿಪರಂಬ ಆಲಕ್ಕೋಡಿನ ಪೀತಾಂಭರನ್ (62), ಉಕ್ಕಿನಡ್ಕದ ಹಮೀದ್ (27), ಯುಪಿ ನಿವಾಸಿ ಅಡ್ಕತ್ತಬೈಲಿನಲ್ಲಿ ವಾಸಿಸುವ ಹಾರೀಫ್ (23), ನೂರುದ್ದೀನ್ (22) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಚೆಂಗಳ ಸಹಕಾರಿ ಆಸ್ಪತ್ರೆಗೆ ಮತ್ತು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಪ್ರಸೀನಾ, ಅರ್ಚನಾ ಸೇರಿದಂತೆ ಇತರ ಹಲವರು ಸಣ್ಣಪುಟ್ಟ ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಅಪಘಾತಕ್ಕೀಡಾದ ಬಸ್ ಕಾಸರಗೋಡಿನಿಂದ ಕಲ್ಲಿಕೋಟೆಗೆ ಸಂಚರಿಸುತ್ತಿತ್ತು. ವಿದ್ಯಾನಗರ ಪೆÇಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.