ಗಣೇಶ್ ಪ್ರಸಾದ್ ಸರ್ವೀಸ್ ಬಸ್ಸಿನಲ್ಲಿ ಪ್ರಯಾಣಿಕರ ಲೂಟಿ

ಸಾಂದರ್ಭಿಕ ಚಿತ್ರ

ಮಂಗಳೂರು ಉಡುಪಿ ಮಧ್ಯೆ ಓಡಾಡುವ ಗಣೇಶ್ ಪ್ರಸಾದ್ ಎಂಬ ಹೆಸರಿನ ಸರ್ವೀಸ್ ಬಸ್ಸಿನಲ್ಲಿ ಬಾಯಿಗೆ ಬಂದಂತೆ ಟಿಕೆಟ್ ದರ ಪ್ರಯಾಣಿಕರಿಂದ ವಸೂಲಿ ಮಾಡುತ್ತಿರುವ ಬಗ್ಗೆ ದೂರು ಬಂದಿದೆ. ಈ ಬಸ್ಸಿನಲ್ಲಿ ಅದೆಷ್ಟೊ ವರ್ಷದಿಂದ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಈ ಬಸ್ಸಿನಲ್ಲಿ ಈಗ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತ ಪ್ರಯಾಣಿಕರಿಂದ ಬಾಯಿಗೆ ಬಂದಂತೆ ದರ ಹೇಳುತ್ತಿದ್ದು ಟಿಕೆಟ್ ಪ್ರಯಾಣಿಕರಿಗೆ ನೀಡುತ್ತಿಲ್ಲ
ಈಗೀಗ ಬಸ್ಸಿನಲ್ಲಿ ಹಣ ಕೊಟ್ಟರೆ ಟಿಕೆಟ್ ಕೊಡದೇ ಬರೇ ಚಿಲ್ಲರೆ ಹಣ ಮಾತ್ರ ವಾಪಾಸ್ ಕೊಡುತ್ತಾರೆ  ಆದ್ದರಿಂದ ಈ ಬಸ್ಸಿನಲ್ಲಿ ಈ ರೀತಿ ಪ್ರಯಾಣಿಕರ ಹಗಲು ದರೋಡೆ ನಡೆಯುತ್ತಿದ್ದರೂ ಯಾಕೆ ಈ ಬಸ್ಸನ್ನು ಕೇಳು ಹೇಳುವವರು ಇಲ್ಲವೇ  ಈ ಬಗ್ಗೆ ಆರ್‍ಟಿಓಗೆ ದೂರು ಸಲ್ಲಿಸಿದ್ದೇವೆ. ಆರ್‍ಟಿಎಗೂ ದೂರು ನೀಡಿದ್ದೇವೆ  ಆದ್ದರಿಂದ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ಕೂಡಲೇ ಈ ಬಸ್ಸಿನಲ್ಲಿ ಜನರ ಸುಲಿಗೆ ನಿಲ್ಲಿಸುವಂತೆ ಕಂಡೆಕ್ಟರ್‍ಗೆ ಎಚ್ಚರಿಕೆ ನೀಡಬೇಕಿದೆ

  • ಮೋಹನ್ ಮೆಂಡನ್
    ಎನ್‍ಐಟಿಕೆ  ಸುರತ್ಕಲ್