ಅರಸು ಸಿಟಿ ಬಸ್ಸಿನಲ್ಲಿ ಪ್ರಯಾಣಿಕರ ದರೋಡೆ

ಮಂಗಳೂರಿನಿಂದ ಸುರತ್ಕಲ್ ಆಗಿ ಕೃಷ್ಣಾಪುರ ಮುಂತಾದ ಕಡೆಗಳಿಗೆ ಓಡಾಡುವ  ಅರಸು 45 ಎಚ್ (ಕೆಎ-19 ಸಿ 4690) ಈ ಬಸ್ ಪ್ರಯಾಣಿಕರ ಹಗಲು ದರೋಡೆ ಮಾಡುತ್ತಿದೆ.

ನಾನು ಡಿಸೆಂಬರ್ 1ರಂದು ಮಧ್ಯಾಹ್ನ ಸುರತ್ಕಲ್ಲಿನಿಂದ ಕುಳಾಯಿಗೆ ಪ್ರಯಾಣಿಸಲು 10 ರೂಪಾಯಿ ನೀಡಿದರೆ ಮೂರು ರೂಪಾಯಿ ಬದಲಿಗೆ ಎರಡು ರೂಪಾಯಿ ಕೊಟ್ಟಾಗ ಮಿನಿಮಮ್ ದರದ ಬಗ್ಗೆ ವಿಚಾರಿಸಿದಾಗ “ನಾವೇನೂ ದರ ನಿಗದಿ ಪಡಿಸುತ್ತಿಲ್ಲ, ಕಂಪ್ಯೂಟರ್ ದರ ನಿಗದಿಪಡಿಸಿದ್ದು, ನಾವೇನೂ ಮಾಡಲು ಸಾಧ್ಯವಿಲ”್ಲ ಎಂದು ಹೇಳಿ ಹೋದ. ಆಗ ನಾನು ಅಷ್ಟಕ್ಕೇ ಬಿಡದೇ ಆತನನ್ನು ತರಾಟೆಗೆ ತೆಗೆದುಕೊಂಡೆ. “ಮಂಗಳೂರಿನಿಂದ ಸುರತ್ಕಲ್, ಕೃಷ್ಭಾಪುರ ಕಡೆ ಹೋಗುವ ಎಲ್ಲಾ ಬಸ್‍ಗಳು ಮಿನಿಮಮ್ ಏಳು ರೂಪಾಯಿ ತೆಗೆಯುವಾಗ ಈ ಬಸ್ಸಿನಲ್ಲಿ ಮಾತ್ರ ಯಾಕೆ ಎಂಟು ರೂಪಾಯಿ ತೆಗೆಯುತ್ತೀರಿ” ಎಂದು ಹೇಳಿದಾಗ ಅಸ್ಪಷ್ಟ ಉತ್ತರ ಕೊಡುತ್ತಾನೆ. ಬೆಳಿಗ್ಗೆನಿಂದ ರಾತ್ರಿತನಕದ ಓಡಾಟದ ಟ್ರಿಪ್ಪಿನಲ್ಲಿ ಪ್ರತೀ ಪ್ರಯಾಣಿಕರಿಂದ ಮಿನಿಮಮ್ ದರ ಒಂದು ರೂಪಾಯಿಯಂತೆ ಎಷ್ಟು ಹಣವನ್ನು ಈ ಕಂಡೆಕ್ಟರ್ ಜೇಬಿಗೆ ಇಳಿಸುತ್ತಾನೆ ? ನೋಟು ರದ್ಧತಿಯಿಂದ ಮೊದಲೇ ಜನಸಾಮಾನ್ಯರು ಚಿಲ್ಲರೆ ಹಣಕ್ಕೆ ಪರದಾಟ ನಡೆಸುತ್ತಿರುವಾಗ ಈ ರೀತಿ ಬೇಕಾಬಿಟ್ಟಿ ದರ ನಿಗದಿಪಡಿಸಿ ಪ್ರಯಾಣಿಕರ ಹಗಲು ದರೋಡೆ ಮಾಡುವುದು ಎಷ್ಟು ಸರಿ ? ಕೂಡಲೇ ಆರ್‍ಟಿಓದವರು ಈ ಬಸ್ಸಿನ ನಂಬ್ರ ಪರಿಶೀಲಿಸಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿ ಹಣ ಪ್ರಯಾಣಿಕರಿಂದ ತೆಗೆಯದಂತೆ ಎಚ್ಚರಿಕೆ ನೀಡಬೇಕಾಗಿದೆ.

  • ಸುಮಿತ್ ಸಾಲ್ಯಾನ್, ಗೋಕುಲ್‍ನಗರ-ಕುಳಾಯಿ