ದಲಿತ ಯುವತಿಯ ಅತ್ಯಾಚಾರ

ಪರಿವಾರ ಮುಖಂಡನ ವಿರುದ್ಧ ಕೇಸು

ಕರಾವಳಿ ಅಲೆ ವರದಿ

ಪುತ್ತೂರು : ಮದುವೆಯಾಗುವುದಾಗಿ ಹೇಳಿ ದಲಿತ ಕುಟುಂಬಕ್ಕೆ ಸೇರಿದ ಯುವತಿಯೊಬ್ಬಳನ್ನು ಅತ್ಯಾಚಾರ ಮಾಡಿರುವ ಘಟನೆ ಸರ್ವೆಯಲ್ಲಿ ನಡೆದಿದ್ದು, ಸಂಘ ಪರಿವಾರದ ಯುವ ನಾಯಕ ದಿನೇಶ್ ಕಡ್ಯ ಎಂಬಾತನ ವಿರುದ್ಧ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಲಿತ ಯುವತಿಯ ತಂದೆ ಮತ್ತು ತಾಯಿ ನಿಧನರಾಗಿದ್ದು, ಯುವತಿ ತನ್ನ ಅಣ್ಣನ ಮನೆಯಲ್ಲಿ ವಾಸವಾಗಿದ್ದಳು. ದಿನೇಶ್ ಕಡ್ಯ ಯುವತಿಯ ಅಣ್ಣ ಕೂಲಿ ಕೆಲಸಕ್ಕೆ ತೆರಳಿದಾಗ ಯುವತಿ ಮನೆಗೆ ಬಂದು ಆಕೆಯಲ್ಲಿ ನನಗೆ ಜಾತಿ, ಧರ್ಮದ ಬಗ್ಗೆ ನಂಬಿಕೆಯಿಲ್ಲ ನಾನು ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಹೇಳಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪುಸಲಾಯಿಸುತ್ತಿದ್ದ. ಅದಕ್ಕೆ ಯುವತಿ ಈಗ

ಬೇಡ ಮೊದಲು ಮದುವೆಯಾಗು ಎಂದು ಹೇಳಿದ್ದಳು. ಆದರೆ ಆರೋಪಿ ದಿನೇಶ್ ಆಕೆಯನ್ನು ಬಲಾತ್ಕಾರವಾಗಿ ನಿರಂತರವಾಗಿ 2017 ಜುಲೈ ತಿಂಗಳಿಂದ ಅತ್ಯಾಚಾರ ಮಾಡುತ್ತಿದ್ದ, ಇವನ ಜೊತೆ ಸತೀಶ ಮತ್ತು ಸಂತೋಷ ಎಂಬವರು ಆಕೆಯ ಮೇಲೆ ಅತ್ಯಾಚಾರ ಮಾಡಿದ ಪರಿಣಾಮ ಆಕೆ ಗರ್ಭವತಿಯಾಗಿದ್ದಳು. ಬಳಿಕ ದಿನೇಶ ಆಕೆಯನ್ನು ಮಣಿಪಾಲ ಆಸ್ಪತ್ರೆಗೆ ಅಬಾರ್ಷನ್ ಮಾಡಿಸಲು ಕರೆದುಕೊಂಡು ಹೋಗಿದ್ದ. ಆದರೆ ಆಸ್ಪತ್ರೆಯ ಸಿಬ್ಬಂದಿ ಒಪ್ಪಿಗೆ ನೀಡದ ಕಾರಣ ಮರಳಿದ್ದರು. ಇದೀಗ ಯುವತಿ ಏಳು ತಿಂಗಳ ಗರ್ಭಿಣಿಯಾಗಿದ್ದು, ದಿನೇಶ ಮದುವೆಯಾಗಲು ನಿರಾಕರಿಸಿ ನೀನು ಕೆಳ ಜಾತಿಯವಳು ಎಂದು ಹೇಳಿದ್ದಾನೆ. ಇದರಿಂದ ನೊಂದ ಯುವತಿ ಸಂಪ್ಯ ಪೆÇಲೀಸರಿಗೆ ದೂರು ನೀಡಿ ನ್ಯಾಯ ಕೊಡಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಪೆÇಲೀಸರು ಅತ್ಯಾಚಾರ ಮತ್ತು ದಲಿತ ದೌರ್ಜನ್ಯ ಕೇಸು ದಾಖಲಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಪೆÇಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. ಸ್ಥಳೀಯವಾಗಿ ಪರಿವಾರ ಸಂಘಟನೆಯ ನಾಯಕನಾಗಿದ್ದ ದಿನೇಶ್ ಕಡ್ಯ ಪ್ರಕರಣ ಸರ್ವೆ ಗ್ರಾಮದ ಜನರನ್ನು ತಲೆ ತಗ್ಗಿಸುವಂತೆ ಮಾಡಿದೆ. ಕೆಲದಿನಗಳ ಹಿಂದೆ ಸರ್ವೆಯಲ್ಲಿ ಕಟ್ಟೆ ವಿವಾದ ಉಂಟಾದ ಸಂದರ್ಭ ಪೆÇಲೀಸರನ್ನು ಅವ್ಯಾಚವಾಗಿ ಬೈದು ಅವಮಾನಮಾಡಿದ್ದ ಆತನ ವಿರುದ್ಧ ಕೆಲವು ಪ್ರಕರಣಗಳು ಇದೆ ಎಂದು ಪೆÇಲೀಸರು ತಿಳಿಸಿದ್ದಾರೆ.

 

 

 

LEAVE A REPLY