ಮಗಳು, ಪ್ರಿಯಕರನನ್ನು ಹೊಡೆದು ಸಾಯಿಸಿದರು

ಸಾಂದರ್ಭಿಕ ಚಿತ್ರ

 ಬಳ್ಳಾರಿ : ತಮ್ಮ ಮಗಳ ಪ್ರೇಮ ವ್ಯವಹಾರದಿಂದ ಬೇಸತ್ತ ಆಕೆಯ  ಹೆತ್ತವರು ಆಕೆಯ ಪ್ರೇಮಿಯ ಜತೆಗೂಡಿ ಆಕೆಯನ್ನೂ ಹೊಡೆದು ಸಾಯಿಸಿದ ಘಟನೆ ಬಳ್ಳಾರಿಯ  ಹಂಪಾಸಾಗರ ಗ್ರಾಮದಲ್ಲಿ ನಡೆದಿದೆ.

ಹಗರಿಬೊಮ್ಮನಹಳ್ಳಿಯ ನಂದಿ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ರೇಷ್ಮಾ ಬಾನು (19) ತನ್ನ ಹೆತ್ತವರ ಕೈಯ್ಯಲ್ಲೇ ಕೊಲೆಗೀಡಾದ ನತದೃಷ್ಟೆ. ಆಕೆ ಹಿರಿಯೂರು ತಾಲೂಕಿನ ಭರಂಪುರ ಎಂಬಲ್ಲಿನ ಎರಡನೇ ಪಿಯು ವಿದ್ಯಾರ್ಥಿ ಕೆ ನಾಗರಾಜ್ ಎಂಬವನನ್ನು ಪ್ರೀತಿಸುತ್ತಿದ್ದಳು. ಕಳೆದ ವರ್ಷ ಬೇಸಿಗೆ ಶಿಬಿರವೊಂದರಲ್ಲಿ ಭೇಟಿಯಾಗಿದ್ದ ಅವರ ನಡುವಿನ ಗೆಳೆತನ ಪ್ರೇಮಕ್ಕೆ ತಿರುಗಿತ್ತು. ಮಗಳು ಯಾವತ್ತೂ ಮೊಬೈಲ್ ಫೋನಿನ ಲೋಕದಲ್ಲೇ ಮುಳುಗಿ ಹೋಗಿರುವುದನ್ನು ನೋಡಿದ  ಹೆತ್ತವರು ಕೊನೆಗೆ ಆಕೆಯ ಪ್ರೇಮ ವ್ಯವಹಾರವನ್ನು ಪತ್ತೆ ಹಚ್ಚಿದ್ದರು. ಆತನನ್ನು ಭೇಟಿಯಾಗದಂತೆ ಹಾಗೂ

ಮಾತನಾಡದಂತೆ ಅವರು ಮೊದಲು ರೇಷ್ಮಾ ಮನವೊಲಿಸಿದರಾದರೂ ನಾಗರಾಜ್ ಮಾರ್ಚ್ 24ರಂದು ಆಕೆಯ ಮನೆಗೆ ಬಂದು ಆಕೆಯನ್ನು ವಿವಾಹವಾಗುವ ಇಂಗಿತ ವ್ಯಕ್ತಪಡಿಸಿದ್ದ.

ಆಗ ಆಕೆಯ ಹೆತ್ತವರು ಆತನಿಗೆ ಕಬ್ಬಿಣದ ಸಲಾಕೆ ಹಾಗೂ ಮರದ ಕೊರಡುಗಳಿಂದ ಹಲ್ಲೆ ನಡೆಸಿದ್ದು ಆತನನ್ನು ರಕ್ಷಿಸಲು ಯತ್ನಿಸಿದ್ದ ತಮ್ಮ ಮಗಳ ಮೇಲೂ ಸಿಟ್ಟಿನಿಂದ ಹಲ್ಲೆ ನಡೆಸಿ ಅವರ ಸಾವಿಗೆ ಕಾರಣರಾಗಿದ್ದಾರೆಂದು ಆಪಾದಿಸಲಾಗಿದೆ.