ಡೀಮ್ಡ್ ವಿ ವಿ ಕಾರ್ಯವೈಖರಿ ಅಧ್ಯಯನಕ್ಕೆ ಸಮಿತಿ ರಚನೆ

ನವದೆಹಲಿ : ಡೀಮ್ಡ್ ವಾರ್ಸಿಟಿಗಳ ಕಾರ್ಯವೈಖರಿ ಅಧ್ಯಯನ ಮಾಡಿ, ನಾಲ್ಕು ತಿಂಗಳೊಳಗೆ ಸಲಹೆ ನೀಡಲು ಕೇಂದ್ರ ಮಾನವ ಸಂಪನ್ಮೂಲಗಳ(ಎಚ್‍ಆರ್‍ಡಿ) ಸಚಿವಾಲಯ ಮೂವರು ಸದಸ್ಯರ ಸಮತಿಯೊಂದು ರಚಿಸಿದೆ. ಪಾಟ್ನ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಾಧೀಶ ನರಸಿಂಹ ರೆಡ್ಡಿ ಈ ಸಮತಿಯ ನೇತೃತ್ವದ ವಹಿಸಿದ್ದು, ಸಮಿತಿಯಲ್ಲಿ ಎಚ್ ಆರ್ ಡಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸುಖ್ಬೀರ್ ಸಿಂಗ್ ಸಂಧು ಮತ್ತು ಅಖಿಲ ಭಾರತ  ತಾಂತ್ರಿಕ ಶಿಕ್ಷಣ ಪರಿಷತ್ತಿನ ಅಧ್ಯಕ್ಷ ಅನಿಲ್ ಸಹಸ್ರಬುದ್ದೆ ಇದ್ದಾರೆ.