ಪಂಚಗವ್ಯ ವೈಜ್ಞಾನಿಕ ಮೌಲ್ಯ ಅಧ್ಯಯನಕ್ಕೆ ಸಮಿತಿ ರಚನೆ

ನವೆದೆಹಲಿ : ಮನುಷ್ಯರ ಕಾಯಿಲೆಗಳಿಗೆ ಔಷಧಿ ಮತ್ತು ಆರೋಗ್ಯಕ್ಕೆ ಉತ್ತಮವೆನ್ನಲಾದ ಪಂಚಗವ್ಯ (ಹಸುವಿನ ಗೊಬ್ಬರ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ) ವೈಜ್ಞಾನಿಕ ಮಾನ್ಯತೆ ಬಗ್ಗೆ ಅಧ್ಯಯನ ಮಾಡಲು ಸರ್ಕಾರ ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್ (ವಿಹಿಂಪ) ಮೂವರು ಸದಸ್ಯರನ್ನೊಳಗೊಂಡ 19 ಸದಸ್ಯರ ಸಮಿತಿಯೊಂದನ್ನು ಸರಕಾರ ರಚಿಸಿದೆ ಎಂದು ಅಂತರ್-ಇಲಾಖೀಯ ಸುತ್ತೋಲೆ ಹೇಳಿದೆ.  ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ ಈ ಸಮಿತಿಯ ನೇತೃತ್ವ ವಹಿಸಿದ್ದಾರೆ. ಸಮಿತಿಯ ವೈಜ್ಞಾನಿಕ ಮಾನ್ಯತೆಯು ಪಂಚಗವ್ಯದ ಲಾಭ ಪಡೆಯುವಲ್ಲಿ ಪ್ರಾಜೆಕ್ಟುಗಳ ಆಯ್ಕೆಗೆ ನೆರವಾಗಲಿದೆ. ಸಾಮಾನ್ಯವಾಗಿ ಹಸುವಿನ ಗೊಬ್ಬರ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ ಈಗ ಆರೋಗ್ಯ, ಪೌಷ್ಠಿಕ ಆಹಾರ ಮತ್ತು ಕೃಷಿ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ ಎಂದು ಸುತ್ತೋಲೆ ಹೇಳಿದೆ.