ಪಂ ಸದಸ್ಯನಿಂದ ತಾ ಪಂ ಅಧ್ಯಕ್ಷೆಗೆ ನಿಂದನೆ ಆರೋಪ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ :  ತಾಲೂಕು ಪಂಚಾಯಿತಿ ಅಧ್ಯಕ್ಷೆ ಗ್ರಾಮ ಪಂಚಾಯಿತಿಗೆ ಪರಿಶೀಲನೆಗೆ ಬಂದಿದ್ದ ಸಮಯದಲ್ಲಿ ಹಿರಿಯ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಅವಾಚ್ಯವಾಗಿ ನಿಂದಿಸಿದ್ದಾರೆ ಎಂಬುದಾಗಿ ಆರೋಪಿಸಿದ ಭಾರತೀಯ ಜನತಾ ಪಕ್ಷ ಘಟನೆ ನಡೆದ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ.

ಆನಗಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಈ ಒಂದು ರಾಜಕೀಯ ಪ್ರಹಸನಕ್ಕೆ ಸಾಕ್ಷಿಯಾಯಿತು.

ಈ ಬಗ್ಗೆ ಕುಂದಾಪುರ ತಾಲೂಕು ಬಿಜೆಪಿ ವತಿಯಿಂದ ಬುಧವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ್ದ ಸಂದರ್ಭ ಸದಸ್ಯ ಗಂಗಾಧರ ಶೆಟ್ಟಿ ಕ್ಷಮಾಪಣೆ ಕೊರಬೇಕೆಂದು ಆಗ್ರಹಿಸಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಗಂಗಾಧರ ಶೆಟ್ಟಿ, “ನಾನು ಅವಾಚ್ಯ ಶಬ್ಧಗಳಿಂದ ನಿಂದಿಸಿಲ್ಲ. ಅಲ್ಲದೇ ತಾಲುಕು ಪಂಚಾಯಿತಿ ಅಧ್ಯಕ್ಷರಿಗೆ ಏಕಾಏಕೀ ಗ್ರಾಮ ಪಂಚಾಯಿತಿಗೆ ನುಗ್ಗಿ ಕಡತ ಪರಿಶೀಲನೆಗೆ ಅವಕಾಶ ಇಲ್ಲ ಎಂದಷ್ಟೇ ಹೇಳಿದ್ದು, ಯಾವುದೇ ಕಾರಣಕ್ಕೆ ಕ್ಷಮೆ ಕೇಳುವುದಿಲ್ಲ” ಎಂದಿದ್ದಾರೆ.