ಶಶಿಕಲಾ ಜೈಲಿಗೆ ; ಪಳನಿಸಾಮಿ ಸೀಎಂ

ಚೆನ್ನೈ : ಜಯಾಲಲಿತಾ ಸಾವಿನ ಬಳಿಕ ತಮಿಳುನಾಡು ಸೀಎಂ ಹುದ್ದೆಗಾಗಿ ನಡೆಯುತ್ತಿರುವ ರಾಜಕೀಯ ಸಂಘರ್ಷಕ್ಕೆ ಶೀಘ್ರ ತೆರೆ ಬೀಳುವ ಲಕ್ಷಣ ಕಂಡು ಬಂದಿದ್ದು, ಅನಿರೀಕ್ಷಿತ ಎಂಬಂತೆ ರಾಜ್ಯಪಾಲ ವಿದ್ಯಾಸಾಗರ್, ರಾಜ್ಯದಲ್ಲಿ ಸರ್ಕಾರ ರಚಿಸಲು ಎಡಪ್ಪದಿ ಕೆ ಪಳನಿಸಾಮಿಗೆ ಅವಕಾಶ ನೀಡಿದ್ದಾರೆ.

ಪಳನಿಸ್ವಾನಿಗೆ ಬಯಸದೆ ಬಂದ ಭಾಗ್ಯ ಇದಾಗಿದೆ. ರಾಜ್ಯಪಾಲರ ಸೂಚನೆಯಂತೆ ಸೀಎಂ ಪಳನಿಸಾಮಿ ಮುಂದಿನ 15 ದಿನದೊಳಗೆ ಅಸೆಂಬ್ಲಿಯಲ್ಲಿ ತನಗಿರುವ ಬಹುಮತ ಸಾಬೀತುಪಡಿಸಬೇಕಿದೆ.

ಆದಾಗ್ಯೂ ಪಳನಿಸಾಮಿ ಶನಿವಾರದಂದೇ ಸದನದಲ್ಲಿ ಬಹುಮತ ಸಾಬೀತುಪಡಿಸುವ ತರಾತುರಿಯಲ್ಲಿದ್ದಾರೆ. ಸೀಎಂ ಹುದ್ದೆಗಾಗಿ ಭಾರೀ ಪ್ರಯತ್ನಿಸಿ ಸದ್ಯ ಜೈಲು ಸೇರಿಕೊಂಡಿರುವ ಎಐಎಡಿಎಂಕೆ ಕಾರ್ಯದರ್ಶಿ ಶಶಿಕಲಾರ ಅನುಯಾಯಿ ಪಳನಿಸಾಮಿಯಾಗಿದ್ದಾರೆ.