`ಹಿಂದೂಸ್ತಾನ್ ಜಿಂದಾಬಾದ್’ ಬರೆದ ಪಾಕ್ ಯುವಕ ಬಂಧನ

ಹರಿಪುರ : `ಹಿಂದೂಸ್ತಾನ್ ಜಿಂದಾಬಾದ್’ (ಭಾರತ ಸುದೀರ್ಘ ಬಾಳಲಿ) ಎಂದು ಗೋಡೆಯ ಮೇಲೆ ಬರೆದ 20 ವರ್ಷ ಹರೆಯದ ಪಾಕಿಸ್ತಾನಿ ಪ್ರಜೆಯನ್ನು ಹರಿಪುರ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ತಾನು ಬಾಲಿವುಡ್ ಸಂಗೀತ ಮತ್ತು ಹಿಂದಿ ಚಿತ್ರ ಪ್ರಿಯ. ನಟನಾಗಬೇಕೆಂದು ಇಚ್ಚಿಸಿದ್ದೇನೆ ಎಂದು ಬಂಧಿತ ಯುವಕ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಈತನ ತಪ್ಪಿಗೆ ಏಳು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಈ ಘೋಷಣೆಯನ್ನು ನಿಷೇಧಿಸಿರÀದಿದ್ದರೂ, ಸೆಕ್ಷನ್ 505ರಡಿ ಶಿಕ್ಷೆ ನೀಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಬಂಧಿತ ಆರೋಪಿ ಸಾಜಿದ್ ಶಾಹನನ್ನು ಈಗ ನ್ಯಾಯಾಂಗ ಕಸ್ಟಡಿಗೆ ನೀಡಲಾಗಿದೆ.