ಭಾರತವನ್ನು ಮತ್ತಷ್ಟು ಕಾಡಲಿದೆ ಪಾಕಿಸ್ತಾನ

ಅಮೆರಿಕಾ ಇಂಟಲಿಜೆನ್ಸ್ ಎಚ್ಚರಿಕೆ

ಕರಾವಳಿ ಅಲೆ ವರದಿ

ವಾಷಿಂಗ್ಟನ್ : “ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳಿಗೆ ದೊರಕುತ್ತಿರುವ ಸುರಕ್ಷಿತ ಆಶ್ರಯತಾಣದಿಂದಾಗಿ ಆ ದೇಶದ ಬೆಂಬಲ ಹೊಂದಿರುವ ಉಗ್ರ ಸಂಘಟನೆಗಳು ಭಾರತ ಮತ್ತು ಅಪ್ಘಾನಿಸ್ತಾನಗಳ ಮೇಲಿನ ದಾಳಿಗಳನ್ನು ಮುಂದುವರಿಸಿ ಅಮೆರಿಕಾದ ಹಿತಾಸಕ್ತಿಗಳ ವಿರುದ್ಧವಾಗಿ ಕಾರ್ಯಾಚರಿಸಬಹುದು” ಎಂದು ಅಮೆರಿಕಾದ ನ್ಯಾಷನಲ್ ಇಂಟಲಿಜೆನ್ಸ್ ನಿರ್ದೇಶಕ ಡ್ಯಾನ್ ಕೋಟ್ಸ್ ಹೇಳಿದ್ದಾರೆ.

ಪಾಕ್ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರರು ಜಮ್ಮುವಿನ ಸುಂಜುವಾನ್ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ ಏಳು ಮಂದಿಯ ಸಾವಿಗೆ ಕಾರಣವಾದ ಘಟನೆಯ ನಂತರದ ಬೆಳವಣಿಗೆಗಳಲ್ಲಿ ಕೋಟ್ ಅವರ ಹೇಳಿಕೆ ಬಂದಿದೆ. “ಭಾರತದೊಂದಿಗೆ ಪಾಕಿಸ್ತಾನದ ಸಂಬಂಧಗಳು ಹದಗೆಡುತ್ತಿರುವುದರ ಜತೆಗೆ ಆ ದೇಶದ ಕೆಟ್ಟ ಆರ್ಥಿಕ ಪರಿಸ್ಥಿತಿ, ದೇಶೀಯ ಭದ್ರತಾ ಸಮಸ್ಯೆಗಳು ಹಾಗೂ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಒಬ್ಬಂಟಿಯಾಗಿ ಬಿಡುವ ಭಯದಿಂದಾಗಿ ಪಾಕಿಸ್ತಾನ ಇಂತಹ  ದುಷ್ಕøತ್ಯಗಳಿಗೆ ಮೊರೆ ಹೋಗಿ ಪ್ರಾಂತ್ಯದಲ್ಲಿ ಅಮೆರಿಕಾ ಹೊಂದಿರುವ ಗುರಿಯನ್ನು ಈಡೇರಿಸಲಾಗದಂತೆ ಮಾಡುತ್ತಿದೆ” ಎಂದು ಸಭೆಯೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲ ಸಂಘರ್ಷ ಸ್ಥಿತಿ ಮುಂದುವರಿದಲ್ಲಿ ಹಾಗೂ ಭವಿಷ್ಯದಲ್ಲಿ ಇಂತಹ ದಾಳಿಗಳು ಮತ್ತೆ ನಡೆದಲ್ಲಿ ಪರಿಸ್ಥಿತಿ ಬಿಗಡಾಯಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.

 

 

LEAVE A REPLY