ಭಾರತದಲ್ಲಿ ಕ್ರಿಕೆಟ್ ಆಡಲು ಪಾಕ್ ಸಿದ್ಧವಿದೆ : ಪಿಸಿಬಿ

ಕರಾಚಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಇಷ್ಟವಿಲ್ಲದಿದ್ದರೂ ಪಾಕಿಸ್ತಾನವು ತನ್ನ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ದ್ವಿಪಕ್ಷೀಯ ಸರಣಿಗಳಿಗಾಗಿ ಭಾರತಕ್ಕೆ ಕಳುಹಿಸಲು ಸಿದ್ಧವಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಶಹರ್ಯಾರ್ ಖಾನ್ ಹೇಳಿದರು. “ಪಾಕಿಸ್ತಾನವು ಭಾರತದಲ್ಲಿ ಕ್ರಿಕೆಟ್ ಆಡಲು ಇಚ್ಚಿಸಿದ್ದರೂ, ಭದ್ರತಾ ಬೆದರಿಕೆ ಕಾರಣ ಮುಂದೊಡ್ಡಿ ಭಾರತವು ಪಾಕ್ ಪ್ರವಾಸ ನಿರಾಕರಿಸುತ್ತಿದೆ” ಎಂದವರು ತಿಳಿಸಿದರು.

2008ರಲ್ಲಿ ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆದಿಲ್ಲ. ಆದರೆ 2012-13ರಲ್ಲಿ ಪಾಕ್ ತಂಡ ಭಾರತದಲ್ಲಿ ಕೆಲವು ಪಂದ್ಯ ಆಡಿತ್ತು.