ವೈಭವೀಕರಣ ತರುವ ನೋವು

ನಮ್ಮ ದೇಶದಲ್ಲಿ ಶ್ರೀಮಂತರಿಗಿಂತ ಬಡವರು ಕೂಲಿ ಕಾರ್ಮಿಕರು ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅಂದಿನ ದಿನದ ಅನ್ನವನ್ನು ಅಂದೇ ಸಂಪಾದಿಸಿಕೊಂಡು ಸಂಸಾರದ ಹೊಟ್ಟೆ ತುಂಬಿಸಬೇಕಾದ ಕಡು ಕಷ್ಟದ ಸ್ಥಿತಿಯಲ್ಲಿರುವವರು ದೇಶದೆಲ್ಲೆಡೆ ಇದ್ದಾರೆ
ಇಂಥವರ ನಡುವೆ ಕೋಟಿ ರೂಪಾಯಿಗಳ ಬಂಗಲೆ ಕಟ್ಟಿ ಹತ್ತಾರು ತಲೆ ಮಾರುಗಳಿಗಾಗುವಷ್ಟು ಆಸ್ತಿ ಸಂಪಾದನೆ ಮಾಡಿ ಮೈತುಂಬಾ ಆಭರಣ ಹೇರಿಕೊಂಡು ಬಡ ಬಗ್ಗರು ತಮ್ಮ ಕನಸು ಮನಸ್ಸಿನಲ್ಲಿಯೂ ಊಹಿಸಿಕೊಳ್ಳಲಾಗದಷ್ಟು ರಾಶಿ ಹಣವನ್ನು ಗುಡ್ಡೆ ಹಾಕಿಕೊಂಡು ವೈಭವದ ಜೀವನ ನಡೆಸುತ್ತಿರುವವರು ಇದ್ದಾರೆ ಅಂಥವರನ್ನು ನೋಡಿದಾಗ ಬಡಪಾಯಿಗೆ ತನ್ನ ಜೀವನ ಏಕಿಷ್ಟು ದಯನೀಯ ಸ್ಥಿತಿಯಲ್ಲಿದೆ ಹಗಲೆಲ್ಲಾ ಬೆವರು ಸುರಿಸಿ ದುಡಿದರೂ ಒಂದೊಳ್ಳೆಯ ಊಟ ಬಟ್ಟೆ ಸೂರು ಶಿಕ್ಷಣ ಹೊಂದಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸಿದಾಗ ಆತನಿಗಾಗುವ ನೋವು ಅನುಭವಿಸಿದವರಿಗೆಷ್ಟೇ ಗೊತ್ತು ಇಂದು ಹಣ ಅಧಿಕಾರ ಶ್ರೀಮಂತಿಕೆಯ ವೈಭವೀಕರಣ ನಡೆಯುತ್ತಿದೆ ನಿಜಕ್ಕೂ ರೈತರು ಬಡವರು ತುಂಬಾ ಕಷ್ಟದ ಸ್ಥಿತಿಯಲ್ಲಿದ್ದಾರೆ ರೈತರಿಲ್ಲದ ದೇಶವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಆದರೂ ಅವನನ್ನು ತೃತೀಯ ಪ್ರಜೆ ಎಂಬಂತೆ ನಡೆಸಿಕೊಳ್ಳಲಾಗುತ್ತಿದೆ ಜಗತ್ತು ಬೆಳೆದಂತೆಲ್ಲ ಅದರೊಟ್ಟಿಗೆ ಬಡತನವೂ ಬೆಳೆಯುತ್ತಿದೆ ಉಳ್ಳವರು ಇಲ್ಲದವರ ನಡುವಿನ ಅಸಮಾನತೆ ಹೆಚ್ಚುತ್ತಲೇ ಇದೆ ಉಳಿದವರೂ ತನ್ನಂತೆಯೇ ಎಂಬ ಮಾನವೀಯ ಗುಣ ಇಲ್ಲದಿರುವುದೇ ಈ ಬಡವ ಶ್ರೀಮಂತ ಕಂದಕ ಸೃಷ್ಟಿಯಾಗಲು ಕಾರಣ

  • ರಘುನಂದನ್ ಜೋಡುಕಟ್ಟೆ   ಕಾರ್ಕಳ