`ಪ್ಯಾಡ್ ಮ್ಯಾನ್’ ಚಾಲೆಂಜ್ ವೈರಲ್

ಇಂದು `ಪ್ಯಾಡ್ ಮ್ಯಾನ್’ ಸಿನಿಮಾ ತೆರೆಕಾಣುತ್ತಿದ್ದು ಚಿತ್ರದ ಪ್ರಮೋಶನ್ನಿನ ಭಾಗವಾಗಿ ನೀಡಿದ್ದ `ಪ್ಯಾಡ್ ಮ್ಯಾನ್ ಚಾಲೆಂಜ್’ ವೈರಲ್ ಆಗಿಬಿಟ್ಟಿದೆ.

ಹಿಂದೆಲ್ಲ ಮಹಿಳೆಯರ `ಆ ದಿನಗಳ’ ಬಗ್ಗೆ ಮಾತಾಡುವುದೇ ಮುಜುಗರ ಪಟ್ಟುಕೊಳ್ಳುತ್ತಿದ್ದರು. ಆದರೀಗ ಆ ಸಂಕೋಚ ಮರೆಯಾಗಿದೆ. ಆ ನೈಸರ್ಗಿಕ ಕ್ರಿಯೆಯ ಸಮಯದಲ್ಲಿನ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡುತ್ತಿದೆ. ಇದಕ್ಕೆ ಆರ್ ಬಲ್ಕಿ ನಿರ್ದೇಶನದ ಅಕ್ಷಯ್ ಕುಮಾರ್, ಸೋನಂ ಕಪೂರ್, ರಾಧಿಕಾ ಆಪ್ಟೆ ಅಭಿನಯದ `ಪ್ಯಾಡ್ ಮ್ಯಾನ್’ ಚಿತ್ರದ ಕೊಡುಗೆಯೂ ಅಪಾರ. ಅದಲ್ಲದೇ ಆ ಚಾಲೆಂಜನ್ನು ಸ್ವೀಕರಿಸಿ ಆಮೀರ್ ಖಾನ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಸೋನಂ ಕಪೂರ್, ಟ್ವಿಂಕಲ್, ಅನುಷ್ಕಾ ಶರ್ಮಾ, ವರುಣ್ ಧಾವನ್ ಮೊದಲಾದ ಬಾಲಿವುಡ್ ನಟನಟಿಯರು ಮಾತ್ರವಲ್ಲದೇ ರವಿಶಾಸ್ತ್ರಿ, ಪಿ ವಿ ಸಿಂಧು ಮುಂತಾದ ಕ್ರೀಡಾ ಕ್ಷೇತ್ರದವರೂ ಪ್ಯಾಡ್ ಹಿಡಿದ ಫೋಟೋವನ್ನು ಸಾವiಜಿಕ ತಾಣದಲ್ಲಿ ಹಾಕಿದ್ದಲ್ಲದೇ ಅವರು ಬೇರೆಯವರಿಗೂ ಈ ಚಾಲೆಂಜ್ ನೀಡುವ ಮೂಲಕ ಅದೀಗ ವೈರಲ್ ಆಗಿಬಿಟ್ಟಿದೆ. ಇದರಿಂದಾಗಿ ಇನ್ನು ಯಾರೂ ಸ್ಯಾನಿಟರಿ ಪ್ಯಾಡ್ ಖರೀದಿಸಲು ಮತ್ತು ಆ ಸಮಸ್ಯೆ ಚರ್ಚಿಸಲು ಹಿಂದೇಟು ಹಾಕಲಾರರು.

ಈ ಸಿನಿಮಾವನ್ನು ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಪ್ರೊಡ್ಯೂಸ್ ಮಾಡುತ್ತಿದ್ದಾಳೆ. ಇದು ಚಿಕ್ಕ ಹಳ್ಳಿಯೊಂದರಲ್ಲಿಯ ಅರಣಾಚಲಂ ಮುರುಗನಾಥಂ ಎನ್ನುವವರು ಮಹಿಳೆಯರಿಗಾಗಿ ಕಡಿಮೆ ದರದ ಸ್ಯಾನಿಟರಿ ಪ್ಯಾಡ್ ತಯಾರಿಸಿ ವಿತರಿಸಿದ ಸಾಮಾಜಿಕ ಕಾರ್ಯಕರ್ತರ ಜೀವನಾಧರಿತ ಚಿತ್ರವಾಗಿದೆ. ಟ್ವಿಂಕಲ್ ಈ ಬಗ್ಗೆ ಪುಸ್ತಕ ಕೂಡಾ ಬರೆದಿದ್ದು ಸಿನಿಮಾ ಮಾಡುವ ಐಡಿಯಾ ಕೂಡಾ ಆಕೆಯದ್ದೇ. ಅಂದ ಹಾಗೆ ಈ ಚಾಲೆಂಜ್ ಶುರುಮಾಡಿದ್ದೇ ಮುರುಗನಾಥಂ ಅವರು.

ಇಂದು ಈ ಸಿನಿಮಾ ಭಾರತದಲ್ಲಷ್ಟೇ ಅಲ್ಲದೇ 50 ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಅದೂ ಅಲ್ಲದೇ ಈ ವಾರ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಮನೋಜ್ ಬಾಜಪೇಯಿ ಮುಖ್ಯ ಪಾತ್ರದಲ್ಲಿ ನಟಿಸಿರುವ `ಅಯ್ಯಾರಿ’ ಚಿತ್ರ ತೆರೆಕಾಣಲು ಮೊದಲು ಶೆಡ್ಯೂಲ್ ಆಗಿದ್ದರೂ ಸೆನ್ಸಾರ್ ಸರ್ಟಿಫಿಕೇಟ್ ತಡವಾಗಿ ಸಿಕ್ಕಿದ್ದರಿಂದ ಚಿತ್ರ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಹಾಗಾಗಿ `ಪ್ಯಾಡ್ ಮ್ಯಾನ್’ ಚಿತ್ರಕ್ಕೆ ಯಾವುದೇ ಸ್ಪರ್ಧೆ ಇಲ್ಲದಿರುವುದರಿಂದ ಚಿತ್ರ ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ.

 

LEAVE A REPLY