ಹಾಸನ-ಬಿ ಸಿ ರೋಡ್ ಚತುಷ್ಪಥಕ್ಕಾಗಿ 3000ಕ್ಕೂ ಅಧಿಕ ಮರಗಳು ಧರಾಶಾಹಿ

Shiradi Ghat Road, NH48

ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ-765ರಲ್ಲಿ ಬರುವ ಹಾಸನ ಹಾಗೂ ಬಿ ಸಿ ರೋಡ್ ಚತುಷ್ಪಥಗೊಳಿಸುವ ಯೋಜನೆಗಾಗಿ ಹೆದ್ದಾರಿಯ ಇಕ್ಕೆಲಗಳಲ್ಲಿಯೂ ಇರುವ ಸಾವಿರಾರು ಮರಗಳನ್ನು  ಕಡಿಯಲಾಗಿದೆ.  ಈಗಾಗಲೇ  ಸುಮಾರು 45 ಕಿ ಮೀ ದೂರದ ತನಕ ಕಾಂಕ್ರಿಟೀಕರಣ ಮುಗಿದಿದ್ದು ಹಲವಾರು ಹಳೆಯ ಮರಗಳು ಹಾಗೂ ಮನೆಗಳನ್ನು  ಈ ಉದ್ದೇಶಕ್ಕಾಗಿ ನೆಲಸಮಗೊಳಿಸಲಾಗಿದೆ. ರಾಜ್ಯದ ಬಂಟ್ವಾಳ ಹಾಗೂ ತಮಿಳುನಾಡಿನ ವೆಲ್ಲೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ- 75 ಇದರಲ್ಲಿ  ಬರುವ ನೆಲಮಂಗಲ-ಬಿಸಿ ರೋಡ್ ರಸ್ತೆಯ 300.9 ಕಿ ಮೀ ಉದ್ದದ ರಸ್ತೆಯನ್ನು ಚತುಷ್ಪಥಗೊಳಿಸುವ ಯೋಜನೆ ಇದಾಗಿದೆ.

ನೆಲಮಂಗಲ ಹಾಗೂ ಹಾಸನ ನಡುವಿನ ರಸ್ತೆ ನಿರ್ಮಾಣ ಕಾರ್ಯ ಮುಗಿದಿದ್ದರೆ, ಹಾಸನ-ಬಿ ಸಿ ರೋಡ್ ರಸ್ತೆ ಕಾರ್ಯವು ಭೂಸ್ವಾಧೀನಲ್ಲೆದುರಾದ ಸಮಸ್ಯೆಗಳಿಂದ ಆರಂಭಗೊಳ್ಳಲು ವಿಳಂಬವುಂಟಾಗಿದೆ.

ಇದೀಗ ಈ ಯೋಜನೆಗಾಗಿ 3000ಕ್ಕೂ ಹೆಚ್ಚು ಮರಗಳನ್ನು ಕಡಿದಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದ್ದು ಈ ಮರಗಳು ನೆರಳು ನೀಡುವುದರ ಜತೆಗೆ ನೂರಾರು ಪಕ್ಷಿಗಳಿಗೆ  ಆಶ್ರಯತಾಣವಾಗಿತ್ತು ಎಂದು ಅವರು ಹೇಳುತ್ತಾರೆ. ಪಳ್ಯ, ಬಳ್ಳುಪೇಟೆ ಹಾಗೂ ಸಕಲೇಶಪುರ ಪಟ್ಟಣಗಳ ಬೈಪಾಸ್ ರಸ್ತೆಗಳಲ್ಲಿರುವ  10,000ಕ್ಕೂ ಅಧಿಕ ರಸ್ತೆಗಳನ್ನು ಕಡಿದಿರುವ ಬಗ್ಗೆಯೂ  ಪರಿಸರವಾದಿಗಳಿಗೆ ತೀವ್ರ ಅಸಮಾಧಾನವಿದೆ.