ಮಂಜೇಶ್ವರ : 100ಕ್ಕೂ ಹೆಚ್ಚು ಮರಳು ಲಾರಿ ವಶ

ಸರಕಾರದ ಬೊಕ್ಕಸಕ್ಕೆ ಲಭಿಸಿದ್ದು ಅರ್ಧ ಕೋಟಿ ರೂಪಾಯಿಗಿಂತಲೂ ಅಧಿಕ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಇಲ್ಲಿನ ಪೆÇಲೀಸ್ ಠಾಣೆಯ ನೂತನ ಎಸ್ಸೈ ಅನೂಪ್ ಕುಮಾರ್ ಅಧಿಕಾರ ಸ್ವೀಕರಿಸಿದ ಕಳೆದ 2 ತಿಂಗಳಿಂದೀಚೆಗೆ 100ಕ್ಕೂ ಮಿಕ್ಕ ಅನಧಿಕೃತ ಮರಳು ಲಾರಿಗಳನ್ನು ವಶಪಡಿಸಿಕೊಂಡು ಸರಕಾರದ ಬೊಕ್ಕಸಕ್ಕೆ ಅರ್ಧ ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತದ ಹಣವನ್ನು ಜಮಾಗೊಳಿಸುವಂತೆ ಮಾಡಿದ್ದಾರೆ.

ಕರ್ನಾಟಕದಿಂದ ಅನಧಿಕೃತವಾಗಿ ಕಾಸರಗೋಡು ಭಾಗಕ್ಕೆ ಆಗಮಿಸುತ್ತಿರುವ ಮರಳು ಲಾರಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮರಳು ವಾಹನಗಳನ್ನು ವಶಪಡಿಸಿಕೊಂಡ ಬಳಿಕ ದಂಡದ ರೂಪದಲ್ಲಿ ಸರಕಾರಕ್ಕೆ ಅರ್ಧ ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಲಭಿಸಿದೆ. ರಾಜ್ಯದಲ್ಲೇ ದಂಡ ವಿಧಿಸಿ ಸರಕಾರದ ಬೊಕ್ಕಸಕ್ಕೆ ಅತೀ ಹೆಚ್ಚು ಲಾಭವನ್ನು ಗಿಟ್ಟಿಸಿದ ಏಕೈಕ ಠಾಣೆ ಎಂಬ ಹೆಗ್ಗಳಿಕೆಗೂ ಮಂಜೇಶ್ವರ ಠಾಣೆ ಅರ್ಹವಾಗಿದೆ.

ಪೆÇಲೀಸರು ವಶಪಡಿಸಿಕೊಂಡ ಮರಳು ಲಾರಿಗಳನ್ನು ಜಿಯೋಲಾಜಿ ಇಲಾಖೆಯಲ್ಲಿ 55,000 ರೂ ದಂಡ ಪಾವತಿಸಿದ ಬಳಿಕ ವಾಹನವನ್ನು ಬಿಡುಗಡೆಗೊಳಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಷ್ಟೊಂದು ಮೊತ್ತ ಮಂಜೇಶ್ವರ ಠಾಣೆಯಿಂದ ಸರಕಾರಕ್ಕೆ ಲಭಿಸಿದೆ.

ನಕಲಿ ದಾಖಲೆ ಸೃಷ್ಟಿಸಿ ಸಾಗಿಸಲಾಗುತ್ತಿರುವ ಮರಳಿನ ಹೊರತಾಗಿ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿರುವ ಅನಧಿಕೃತ ಕಡವುಗಳ ಮೂಲಕವೂ ಮರಳು ಸಾಗಾಟ ನಡೆಸಲಾಗುತ್ತಿದೆ. ಪೈವಳಿಕೆ ಜೋಡು ಕಲ್ಲು ಹೊಳೆಯಿಂದ ಅನಧಿಕೃತವಾಗಿ ಮರಳು ಸಾಗಾಟ ನಡೆಸುತ್ತಿರುವ ಮಧ್ಯೆ ಮಂಜೇಶ್ವರ ಠಾಣಾಧಿಕಾರಿ ಅನೂಪ್ ದಾಳಿ ನಡೆಸಿ ಇತ್ತೀಚೆಗೆ 2 ಟಿಪ್ಪರ್ ವಶಪಡಿಸಿಕೊಂಡಿದ್ದರು. ಹೊಳೆಯ ಮರಳಾದ ಕಾರಣ ಲಾರಿಯನ್ನು ಬಿಡುಗಡೆಗೊಳಿಸಲು ಕೋರ್ಟು ಮೆಟ್ಟಲೇರುವುದರ ಜೊತೆಯಾಗಿ ಇಮ್ಮಡಿ ದಂಡ ಕೂಡಾ ಪಾವತಿಸಬೇಕಾಗಿ ಬಂದಿದೆ.