300 ಚಿತ್ರಮಂದಿರಗಳಲ್ಲಿ ಭರ್ಜರಿ

ಧ್ರುವ ಸರ್ಜಾನ ಚಿತ್ರ ಸ್ವಲ್ಪ ತಡವಾಗಿ ಬಿಡುಗಡೆಯಾಗುತ್ತಿದ್ದರೂ `ಭರ್ಜರಿ’ಯಾಗಿಯೇ ತೆರೆಯ ಮೇಲೆ ಬರುತ್ತಿದೆ. ಸಿನಿಮಾ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ಹಿಟ್ ಆಗಿದ್ದು ಸಿನಿಮಾ ಕೂಡಾ ಸೂಪರ್ ಹಿಟ್ ಆಗುವ ನಿರೀಕ್ಷೆ ಹೊಂದಿದ್ದಾರೆ ನಿರ್ಮಾಪಕ ಕನಕಪುರ ಶ್ರೀನಿವಾಸ್.

ಈ ಸಿನಿಮಾವನ್ನು ಧ್ರುವನಿಗೆ `ಬಹದ್ದೂರ್’ ಸಿನಿಮಾ ನಿರ್ದೇಶಿಸಿದ್ದ ಚೇತನ್ ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ಚೇತನ್ ಸ್ವತ: ಈ ಸಿನಿಮಾಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ವಿ. ಹರಿಕೃಷ್ಣರೇ ಧ್ರುವನ ಈ ಮೊದಲಿನ ಚಿತ್ರಕ್ಕೂ ಸಂಗೀತ ನೀಡಿದ್ದು ಈ ಚಿತ್ರಕ್ಕೂ ಅವರೇ ಸಂಗೀತ ನೀಡಿದ್ದು ಇನ್ನೊಂದು ವಿಶೇಷ. ಧ್ರುವ ಸರ್ಜಾಗೆ ನಾಯಕಿಯರಾಗಿ ರಚಿತಾ ರಾಮ್, ಹರಿಪ್ರಿಯಾ, ವೈಶಾಲಿ  ನಟಿಸಿದ್ದಾರೆ. ಧ್ರುವ ಈ ಸಿನಿಮಾದ ಮೂಲಕ ಹ್ಯಾಟ್ರಿಕ್ ಹೀರೋ ಆಗಿ ಮೂಡಿಬರುತ್ತಾನಾ ನೋಡಬೇಕಿದೆ.