ಕಾಲು ಜಾರಿ ಬಾವಿಗೆ ಬಿದ್ದು ಯುವತಿ ಸಾವು

ಅವಘಡ ಸಂಭವಿಸಿದ ಸ್ಥಳದಲ್ಲಿ ಪೊಲೀಸರು ಪಂಚನಾಮೆ ನಡೆಸಿದರು

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಬಾವಿಯಿಂದ ನೀರು ತರಲೆಂದು ತೆರಳಿದ್ದ ಯುವತಿಯೊಬ್ಬಳು ಕಾಲು ಜಾರಿ ಬಾವಿಯೊಳಗೆ ಬಿದ್ದು ಸಾವನ್ನಪ್ಪಿದ ಘಟನೆ ಗಂಗೊಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯ ನಾಡಾದ ಕಡ್ಕೆ ಎಂಬಲ್ಲಿ ಶನಿವಾರ ಮುಂಜಾನೆ ನಡೆದಿದೆ. ಮೃತ ಯುವತಿಯನ್ನು ನಾಡಾ ಕಡ್ಕೆ ನಿವಾಸಿ ಶೇಖರ ಶೆಟ್ಟಿ ಎಂಬುವರ ಪುತ್ರಿ ರೂಪಾ (20) ಎಂದು ಗುರುತಿಸಲಾಗಿದೆ.

ರೂಪಾ ಬಂಟ್ವಾಡಿ ಸಮೀಪದಲ್ಲಿರುವ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಪ್ರತಿದಿನ ಬೆಳಿಗ್ಗೆ ಐದು ಗಂಟೆಗೆ ಎದ್ದು ಬಾವಿಯಿಂದ ನೀರು ತಂದು ಅಡುಗೆ ಮಾಡಿ ಕೆಲಸಕ್ಕೆ ಹೋಗುತ್ತಿದ್ದಳು ಎನ್ನಲಾಗಿದೆ. ಶನಿವಾರ ಬೆಳಿಗ್ಗೆ ಐದು ಗಂಟೆಗೆ ಎದ್ದು ನೀರು ತರಲೆಂದು ಮನೆ ಎದುರಿನ ಬಾವಿಗೆ ಹೋದವಳು ಬಾವಿಯಿಂದ ನೀರೆತ್ತುವ ಸಂದರ್ಭ ಆಯತಪ್ಪಿ ಬಾವಿಗೆ ಬಿದ್ದಿದ್ದಾಳೆನ್ನಲಾಗಿದೆ. ಗಂಗೊಳ್ಳಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.