18 ರಂದು ಅಂಚೆ ವ್ಯವಹಾರ ಸ್ಥಗಿತ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿರುವ ಪ್ರಧಾನ ಅಂಚೆ ಕಚೇರಿಗಳು, ಉಪ ಅಂಚೆ ಕಚೇರಿಗಳಲ್ಲಿ ಉನ್ನತ ತಂತ್ರಜ್ಞಾನದ ಅನುಷ್ಠಾನ ಮಾಡಲಿರುವುದರಿಂದ ಸೆಪ್ಟೆಂಬರ್ 18ರಂದು ಪ್ರಧಾನ ಅಂಚೆ ಕಚೇರಿಗಳು ಹಾಗೂ ಉಪ ಅಂಚೆ ಕಚೇರಿಗಳಲ್ಲಿ ಯಾವುದೇ ವ್ಯವಹಾರಗಳು ನಡೆಯುವುದಿಲ್ಲ. ಶಾಖಾ ಅಂಚೆ ಕಚೇರಿಗಳಲ್ಲಿ ಸೆಪ್ಟೆಂಬರ್ 16 ಮತ್ತು 18ರಂದು ಯಾವುದೇ ವ್ಯವಹಾರ ನಡೆಯುವುದಿಲ್ಲ. ನಂತರ ಕೆಲವು ದಿನಗಳ ಕಾಲ ಹೊಸ ವ್ಯವಸ್ಥೆಗೆ ಹೊಂದಾಣಿಕೆ ಆಗುವ ತನಕ ಅಂಚೆ ಸೇವೆಗಳಲ್ಲಿ ಸ್ವಲ್ಪ ಮಟ್ಟಿನ ಅಡೆತಡೆಗಳಾಗಬಹುದು. ಸಾರ್ವಜನಿಕರು ಸಹಕರಿಸಲು ಹಿರಿಯ ಅಂಚೆ ಅಧೀಕ್ಷಕರು ವಿನಂತಿಸಿದ್ದಾರೆ.