ಚುನಾವಣೆಗಳಿಗೆ ಮತಪತ್ರ ಬಳಸಲು ವಿಪಕ್ಷಗಳ ಆಗ್ರಹ

ನವದೆಹಲಿ : ಹದಿನಾರು ವಿಪಕ್ಷಗಳ ಪ್ರತಿನಿಧಿಗಳ ನಿಯೋಗವೊಂದು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಚುನಾವಣೆಗಳಿಗೆ ಹಳೆಯ ಪದ್ಧತಿಯಂತೆ ಬ್ಯಾಲೆಟ್ ಪೇಪರ್ ಅಥವಾ ಮತಪತ್ರಗಳನ್ನು ಈಗಿನ ವಿದ್ಯುನ್ಮಾನ ಮತಯಂತ್ರಗಳ ಬದಲು ಉಪಯೋಗಿಸಬೇಕೆಂದು ಮನವಿ ಮಾಡಿವೆ. ಕಾಂಗ್ರೆಸ್ ನಾಯಕರಾದ ಗುಲಾಮ್ ನಬಿ ಆಜಾದ್,  ಆನಂದ್ ಶರ್ಮ, ಸಿಪಿಐ ನಾಯಕ ಡಿ ರಾಜಾ, ಬಿಎಸ್ಪಿ, ಡಿಎಂಕೆ, ತೃಣಮೂಲ ಕಾಂಗ್ರೆಸ್ ಮುಂತಾದ ಪಕ್ಷಗಳ ಪ್ರತಿನಿಧಿಗಳು ನಿಯೋಗದಲ್ಲಿದ್ದರು.

LEAVE A REPLY