ದೇಶದಲ್ಲಿ ಶೇ 41 ಶಾಲೆಗಳಲ್ಲಿ ಮಾತ್ರ ಬಿಸಿಯೂಟ ತಯಾರಿಗೆ ಎಲ್ ಪಿ ಜಿ

ಸಾಂದರ್ಭಿಕ ಚಿತ್ರ

ನವದೆಹಲಿ : ಈ ದೇಶದಲ್ಲಿ ಬರೇ ಶೇ 41ರಷ್ಟು ಶಾಲೆಗಳಲ್ಲಿ ಮಾತ್ರ ಗ್ಯಾಸಿನಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಅಡುಗೆ ತಯಾರಿಸ್ಪಡುತ್ತಿದೆ ಎಂದರೆ ನೀವು ನಂಬಲೇಬೇಕು.

ಮಾನವ ಸಂಪನ್ಮೂಲ ಅಭಿವೃದ್ಧಿಯ (ಎಚ್ ಆರ್ ಡಿ) ಸರ್ವ ಶಿಕ್ಷಣ ಅಭಿಯಾನದಡಿ ಶಾಲೆಗಳಿಗೆ ಅಡುಗೆ ಅನಿಲ ಒದಗಿಸಲು ಯಾವುದೇ ಹಣಕಾಸು ಹಂಚಿಕೆ ಮಾಡಿಕೊಂಡಿಲ್ಲ. ಹಾಗಾಗಿ ಬಹುತೇಕ ರಾಜ್ಯಗಳ ಶಾಲೆಗಳಲ್ಲಿ ಈಗಲೂ ಎಲ್ ಪಿ ಜಿ ಸಂಪರ್ಕ ಸಿಕ್ಕಿಲ್ಲ.

ಪರಿಸರ ರಕ್ಷಣೆ ಉದ್ದೇಶದಿಂದ ಕಟ್ಟಿಗೆ ಬಳಸಿ ಅಡುಗೆ ತಯಾರಿಸುವುದರ ಬದಲಿಗೆ ಶಾಲೆಗಳಲ್ಲಿ ಎಲ್ ಪಿ ಜಿ ಬಳಕೆಯಿಂದ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಮಾರ್ಗಸೂಚಿಯೊಂದಿದೆ.

ಸಚಿವಾಲಯದ ಡಾಟಾದ ಪ್ರಕಾರ ಕರ್ನಾಟಕದಲ್ಲಿ ಶೇ 97, ನಾಗಾಲ್ಯಾಂಡಿನಲ್ಲಿ ಶೇ 86, ಉತ್ತರ ಪ್ರದೇಶದಲ್ಲಿ ಶೇ 62 ಮತ್ತು ಜಮ್ಮು-ಕಾಶ್ಮೀರದಲ್ಲಿ ಶೇ 61ರಷ್ಟು ಎಲ್ ಪಿ ಜಿ ಸಂಪರ್ಕ ಇದೆ.