ನಳಿನ್ಉಚ್ಛಾಟನೆ ಕೋರಿ ಆನ್ಲೈನ್ ಪಿಟಿಶನ್

ಪೊಲೀಸ್ ಜತೆ ರ್ದುವರ್ತನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪೊಲೀಸ್ ಅಧಿಕಾರಿಯೊಬ್ಬರ ಜತೆ ರ್ದುವರ್ತನೆ ತೋರಿದ ದಕ್ಷಿಣ ಕನ್ನಡ ಸಂಸದ ನಳಿನ್ ಅವರ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮೇಕ್ ಎ ಚೇಂಜ್ ಫೌಂಡೇಶನ್ ಅಧ್ಯಕ್ಷ ಸುಹೈಲ್ ಕಂದಕ್ ಅವರು ಚೇಂಜ್.ಆರ್ಗ್ ಮೂಲಕ ಆನ್ಲೈನ್ ಪಿಟಿಶನ್ ಒಂದನ್ನು ಆರಂಭಿಸಿ ಸಂಸದರನ್ನು ಉಚ್ಛಾಟಿಸುವಂತೆ  ಪ್ರಧಾನಿ ನರೇಂದ್ರ ಮೋದಿಯನ್ನು ಆಗ್ರಹಿಸಿದ್ದಾರೆ.

“ಇಂತಹ ಒಬ್ಬ ಸಂಸದರಿಂದ ನಮ್ಮ ಯುವಜನತೆ ಯಾ ನಾಗರಿಕರು ಪ್ರಭಾವಿತರಾಗುವುದು ನಮಗೆ ಬೇಕಿಲ್ಲ” ಎಂದು ಪಿಟಿಶನ್ ಹೇಳಿದೆ. ಇಲ್ಲಿಯ ತನಕ ಈ ದೂರಿಗೆ 200ಕ್ಕೂ ಹೆಚ್ಚು ಮಂದಿ ಸಹಿ ಹಾಕಿ ಬೆಂಬಲ ವ್ಯಕ್ತಪಡಿಸಿದ್ದಾರೆ.

“ಈ ಸಹಿ ಆಂದೋಲನದ ಹಿಂದೆ ಯಾವುದೇ ಪಕ್ಷ ಯಾ ಸಿದ್ಧಾಂತದ ವಿಚಾರ ಬರದು. ಈ ಸಂಸದರು ಈ ಹಿಂದೆ ಕೂಡ ಜಿಲ್ಲೆಗೆ ಬೆಂಕಿ ಬೀಳುವುದು ಎಂದು ಭಾಷಣವೊಂದರಲ್ಲಿ ಹೇಳಿ ವಿವಾದಕ್ಕೀಡಾಗಿದ್ದರು. ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಅವರು ಹೀಗೆ ವರ್ತಿಸಲು ಹೇಗೆ ಸಾಧ್ಯ ? ಈಗಿನ ಜನಾಂಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿವೆ. ಅವರೇನು ಅಂದುಕೊಳ್ಳುತ್ತಾರೆ ? ಸರಕಾರಿ ಅಧಿಕಾರಿಗಳೊಂದಿಗೆ ವರ್ತಿಸುವ ರೀತಿ ಇದೇ ಎಂದು ಅಂದುಕೊಳ್ಳುತ್ತಾರೆಯೇ ?” ಎಂದು ಅವರು ಪ್ರಶ್ನಿಸಿದರು.

“ಇಂತಹ ವರ್ತನೆ ನಿಲ್ಲಬೇಕು. ನಮ್ಮ ಸಂಸದರನ್ನು ಬದಲಾಯಿಸುವ ಕಾಲ ಬಂದಿದೆ” ಎಂದು ಕಟೀಲ್ ವರ್ತನೆಯಿಂದ ಬೇಸತ್ತಿರುವ ಸುಹೈಲ್ ಹೇಳಿದ್ದಾರೆ.

ಮಂಗಳೂರು ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಾಗೂ ಬಂಧಿಸಲ್ಪಟ್ಟಿದ್ದ ಪಕ್ಷ ನಾಯಕರುಗಳ ಬಿಡುಗಡೆಗೆ ಆದ ವಿಳಂಬದಿಂದ ಕೆಂಡಾಮಂಡಲರಾಗಿದ್ದ ಸಂಸದ ನಳಿನ್ ಮಂಗಳೂರು ಪೂರ್ವ ಠಾಣೆಯ ಇನಸ್ಪೆಕ್ಟರ್ ಮಾರುತಿ ನಾಯಕ್ ಅವರನ್ನು ತರಾಟೆಗೆ ತೆಗೆದುಕೊಳ್ಳುವ ವೀಡಿಯೋ ಬಹಿರಂಗಗೊಂಡು ವೈರಲ್ ಆಗಿತ್ತು.

2 COMMENTS

  1. ಇಂತಹ ಕಚ್ದಾ ಮಂತ್ರಿಗಳಿಂದಲೇ ನಮ್ಮ ಭಾರತಕ್ಕೆ ಶನಿ ಹಿಡಿದದ್ದು. ದಯವಿಟ್ಟು ಇನ್ನಾದರೂ ಓಟು ನೀಡಿ ಹಾರೈಸುವ ನಾಗರಿಕರು ಎದ್ದೇಳುವಿರೋ ?

LEAVE A REPLY