ಒಎನ್ಜಿಸಿ ಶಿಪ್ ಯಾರ್ಡಿನಲ್ಲಿ ಸ್ಫೋಟ : ಐವರು ಮೃತ

ಸಾಂದರ್ಭಿಕ ಚಿತ್ರ

ಕೊಚ್ಚಿ : ಇನ್ನಿನ ಶಿಪ್ ಯಾರ್ಡಿನಲ್ಲಿ ದುರಸ್ತಿಗೊಳಗಾಗುತ್ತಿದ್ದ ಸಾಗರ್ ಭೂಷಣ್ ಎಂಬ ಒಎನ್ಜಿಸಿ ಡ್ರಿಲ್ ಶಿಪ್ಪಿನಲ್ಲಿ ಮಂಗಳವಾರ ಉಂಟಾದ ಸ್ಫೋಟದಲ್ಲಿ ಐದು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು ಏಳು ಮಂದಿ ಗಾಯಗೊಂಡಿದ್ದಾರೆ.

ನೌಕೆಯ ನೀರಿನ ಟ್ಯಾಂಕ್ ಒಳಗಡೆ ನಿರ್ವಹಣೆ ಕಾರ್ಯ ನಡೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಸಾವಿಗೀಡಾದ ಕೆ ಪಿ ಜಯನ್ ಎಂಬವರು ಈ ನೌಕೆಯ ಎಸಿ ಘಟಕದ ಸಮೀಪ ಅನಿಲ ಸೋರಿಕೆಯಾಗುತ್ತಿದೆಯೆಂಬುದನ್ನು ಮೊದಲು ಪತ್ತೆ ಹಚ್ಚಿದವರಾಗಿದ್ದರು. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರೂ 10 ಲಕ್ಷ ಪರಿಹಾರ ನೀಡಲಾಗುವುದು. ಘಟನೆಗೆ ಕಾರಣ ತಿಳಿಯಲು ಮೂರು ಪ್ರತ್ಯೇಕ ತನಿಖೆಗಳು ನಡೆಯಲಿದ್ದು ಒಂದು ತನಿಖೆ ಕೊಚ್ಚಿ ಶಿಪ್ ಯಾರ್ಡಿನ ಆಂತರಿಕ ತನಿಖೆಯಾಗಲಿದ್ದರೆ ಇನ್ನೆರಡು ತನಿಖೆಗಳನ್ನು ಫ್ಯಾಕ್ಟರೀಸ್ ಮತ್ತು ಬಾಯ್ಲರ್ಸ್ ಘಟಕ ಮತ್ತು ಪೊಲೀಸ್ ಇಲಾಖೆ ಕೈಗೆತ್ತಿಕೊಳ್ಳಲಿವೆ.

LEAVE A REPLY