ಟ್ಯಾಂಕರ್-ಪಿಕಪ್ ಡಿಕ್ಕಿ : ಒಬ್ಬ ಆಸ್ಪತ್ರೆಗೆ

ಅಪಘಾತಕ್ಕೀಡಾದ ವಾಹನಗಳು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾಞಂಗಾಡ್ ರಾಷ್ಟ್ರೀಯ ಹೆದ್ದಾರಿಯ ಪೆರಿಯ ಪೆÇಲೀಸ್ ಏಯ್ದ್ ಪೆÇೀಸ್ಟ್ ಸಮೀಪ ಟ್ಯಾಂಕರ್ ಲಾರಿ ಪಿಕಪ್ ಪರಸ್ಪರ  ಡಿಕ್ಕಿ ಹೊಡೆದ ಅಪಘಾತದಲ್ಲಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದೆ. ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಹಾಗೂ ಕಣ್ಣೂರು ಕಡೆಗೆ ತೆರಳುತ್ತಿದ್ದ ಪಿಕಪ್ ಡಿಕ್ಕಿ ಹೊಡೆದಿದೆ. ಗಾಯಾಳು ಪಿಕಪ್ ಚಾಲಕ ಮುರುಗನ್ ಎಂಬಾತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.