ಸಿಡಿಮದ್ದು ಸ್ಫೋಟ : ಒಬ್ಬ ಆಸ್ಪತ್ರೆಗೆ

ಬದಿಯಡ್ಕ : ಮನೆಯಲ್ಲಿ ಸ್ಫೋಟಕ ವಸ್ತು ತಯಾರಿಸುವ ವೇಳೆ ಆಕಸ್ಮಿಕವಾಗಿ ಸ್ಫೋಟಿಸಿ ಮಧ್ಯವಯಸ್ಕರೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬದಿಯಡ್ಕ ಸಮೀಪದ ಕೆಡೆಂಜಿಯ ಅಣ್ಣು (65) ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ವ್ಯಕ್ತಿ. ತಮ್ಮ ಮನೆಯಲ್ಲಿ ಸಿಡಿಮದ್ದು ತಯಾರಿಸುವ ವೇಳೆ ಈ ಘಟನೆ ನಡೆದಿದೆ. ಸಿಡಿಮದ್ದು ತಯಾರಿಕೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಅಣ್ಣು ಹಲವು ವರ್ಷಗಳ ಕಾಲ ಸಿಡಿಮದ್ದು ತಯಾರಿಕ ಘಟಕವೊಂದರಲ್ಲಿ ದುಡಿದಿದ್ದು, ಈ ನಡುವೆ ಮನೆಯಲ್ಲಿ ಗೌಪ್ಯವಾಗಿ ಅನಧಿಕೃತ ಸಿಡಿಮದ್ದು ತಯಾರಿಕೆಯಲ್ಲಿ ನಿರತರಾಗಿರಬೇಕೆಂದು ಸಂಶಯಿಸಲಾಗಿದೆ. ಸ್ಥಳಕ್ಕೆ ಪೆÇಲೀಸರು ಹಾಗೂ ಬಾಂಬ್ ತಪಾಸಣಾ ತಂಡ ಭೇಟಿ ನೀಡಿ ತನಿಖೆ ಕೈಗೆತ್ತಿಕೊಂಡಿದೆ.