ಕಾರಿಗೆ ಬಸ್ ಡಿಕ್ಕಿ, ಒಬ್ಬರಿಗೆ ಗಾಯ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ನಾವೂರು ಗ್ರಾಮದ ಪೊಯಿಲೋಡಿ ಎಂಬಲ್ಲಿ ಕಾರೊಂದಕ್ಕೆ ಸರಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದರು.

ಬೆಳ್ತಂಗಡಿ ತಾಲೂಕಿನ ತಿರುಮಲೇಶ್ವರ ಹಾಗೂ ರಾಘವೇಂದ್ರ ಗಾಯಗೊಂಡವರು. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಗೊಂಡಿದೆ. ಅಪಘಾತದ ವೇಳೆ ಇದೇ ದಾರಿಯಲ್ಲಿ ಸಾಗಿ ಬರುತ್ತಿದ್ದ ಎಡಿಶನಲ್ ಎಸ್ಪಿ ವೇದಮೂರ್ತಿ ಅವರು ತಮ್ಮ ವಾಹನ ನಿಲ್ಲಿಸಿ ಅಪಘಾತದ ಗಾಯಾಳುಗಳನ್ನು ಚಾಲಕ ಸತೀಶ್ ಹಾಗೂ ಭದ್ರತಾ ಸಿಬ್ಬಂದಿ ಚಂದ್ರಶೇಖರ್ ಅವರ ನೆರವಿನೊಂದಿಗೆ ಪೊಲೀಸ್ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.