ಬಸ್ ಪಲ್ಟಿ : ಒಬ್ಬ ಸಾವು

37 ಜನರಿಗೆ ಗಾಯ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಅಂಕೋಲಾದ ಮದುವೆ ಅಡುಗೆ ಕಾರ್ಯ ಮುಗಿಸಿ ಬೆಂಗಳೂರಿಗೆ ಹೊರಟಿದ್ದ ಬಸ್ ಬುಧವಾರ ರಾತ್ರಿ ಇಸಳೂರು ಕೆರೆ ತಿರುವಿನಲ್ಲಿ ಪಲ್ಟಿಯಾದ ಪರಿಣಾಮ ಒಬ್ಬ ಮೃತಪಟ್ಟಿದ್ದು, 37 ಜನರು ಗಾಯಗೊಂಡಿದ್ದಾರೆ.

ಬೆಂಗಳೂರು ಸೇರಿದಂತೆ ವಿವಿಧೆಡೆ ಅಡುಗೆ ಸಿದ್ಧಪಡಿಸುವ ತಂಡವು ಅಂಕೋಲಾಕ್ಕೆ ಬಂದು ಮದುವೆ ಕಾರ್ಯ ಮುಗಿಸಿ ವಾಪಸ್ ಹೋಗುತ್ತಿದ್ದು ಸುಮಾರು ರಾತ್ರಿ 10.30 ಗಂಟೆ ಹೊತ್ತಿಗೆ ಇಸಳೂರು ಕೆರೆ ತಿರುವಿನಲ್ಲಿ ಬಸ್ ಪಲ್ಟಿಯಾಗಿ ಗದ್ದೆಗೆ ಹೋಗಿದ್ದು, ಅಲ್ಲಿಯೂ ಪಲ್ಟಿಯಾಗಿ ಬಿದ್ದಿದೆ. ಬಸ್ಸಿನಲ್ಲಿದ್ದ ಚಿತ್ರದುರ್ಗದ ದಿನೇಶ ನಾಯ್ಕ ಮೃತಪಟ್ಟಿದ್ದಾರೆ. ಅಜಯ ಸರನಾಯಕ, ನವೀನಕುಮಾರ, ಕಲಂದರ ಸಾಬ, ದೇವರಾಜ, ಸಂದೀಪ, ಆಕಾಶ, ರಂಗನಾಥ, ಸುರೇಶ, ಸಂತೋಷ, ಲಕ್ಷ್ಮಣ, ಶಶಿಕುಮಾರ, ಸಾಗರ, ಶಿವಕುಮಾರ ಸೇರಿದಂತೆ 37 ಜನರಿಗೆ ಶಿರಸಿ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.