ಒಬ್ಬ ದುರ್ಮರಣ, ಇಬ್ಬರು ಗಂಭೀರ

ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು

ನಿಯಂತ್ರಣ ತಪ್ಪಿ ಹೊಂಡಕ್ಕುರುಳಿದ ಕಾರಲ್ಲಿ ಪಿಸ್ತೂಲ್

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಜೇಶ್ವರ ವಾಮಂಜೂರು ಚೆಕ್ ಪೆÇೀಸ್ಟ್ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಹೊಂಡಕ್ಕುರುಳಿ ಒಬ್ಬ ದಾರುಣವಾಗಿ ಮೃತಪಟ್ಟು ಇಬ್ಬರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚೆರ್ವತ್ತೂರು ಪಡನ್ನ ನಿವಾಸಿ ಶಂಶುದ್ದೀನ್ (28) ಮೃತ ದುರ್ದೈವಿ. ಉಪ್ಪಳ ಕುಕ್ಕಾರ್ ನಿವಾಸಿಗಳಾದ ಡಿಕಿ ಅಮ್ಮಿ ಯಾನೆ ಮೊಹಮ್ಮದ್ ಅಮೀರ್ (30) ಹಾಗೂ ಅಬ್ದುಲ್ ಲತೀಫ್ (29) ಎಂಬವರು ಗಾಯಗೊಂಡಿದ್ದಾರೆ. ಭಾನುವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡವರ ಪೈಕಿ ಒಬ್ಬ ಓಡಿ ಪರಾರಿಯಾಗಿರುವುದು ಹಲವು ಶಂಕೆಗಳಿಗೆ ಕಾರಣವಾಗಿದೆ. ಅಪಘಾತಕ್ಕೀಡಾದವರನ್ನು ಹೊರತೆಗೆದು ಕಾರನ್ನು ಪರಿಶೀಲಿಸಿದ ವೇಳೆ ಪಿಸ್ತೂಲ್ ಪತ್ತೆಯಾಗಿದೆ. ಇದು ಹಲವು ಶಂಕೆಗೆ ಕಾರಣವಾಯಿತು. ಬಳಿಕ ಅದು ಮಕ್ಕಳ ಆಟಿಕೆ ಎಂಬುದಾಗಿ ಪೆÇಲೀಸರು ತಿಳಿಸಿದರು.

ಕಾರನ್ನು ಮಂಜೇಶ್ವರ ಠಾಣೆಗೆ, ಶವವನ್ನು ಮಂಗಲ್ಪಾಡಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಪಘಾತದಿಂದ ಆಲ್ಟೋ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಆಟಿಕೆ ಪಿಸ್ತೂಲ್ ಪತ್ತೆಯಾಗಿರುವ ಕಾರಣ ಹಲವು ಅನುಮಾನಗಳಿದ್ದು, ಆಸ್ಪತ್ರೆಯಲ್ಲಿದ್ದವರಿಗೆ ಪೆÇಲೀಸರು ಕಾವಲು ಏರ್ಪಡಿಸಿದ್ದಾರೆ.