ಲಾರಿ ಚಾಲಕಗೆ ಪಿಸ್ತೂಲ್ ತೋರಿಸಿ ದರೋಡೆ ಪ್ರಕರಣ : ಒಬ್ಬ ಬಂಧನ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ನಿಲ್ಲಿಸಲಾಗಿದ್ದ ಲಾರಿ ಚಾಲಕಗೆ ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿ ಎರಡು ಮೊಬೈಲ್ ಹಾಗೂ ಒಂದು ಸಾವಿರ ರೂ ನಗದು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೆÇಲೀಸರು ಒಬ್ಬನನ್ನು ಬಂಧಿಸಿದ್ದಾರೆ.

ಕಾಸರಗೋಡು ಚಟ್ಟಂಕುಝಿ ನಿವಾಸಿ ಖಾಲಿಯ ಎಂಬ ಬದ್ರುದ್ದೀನ್ (25) ಬಂಧಿತ ಆರೋಪಿ.ಈತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ದರೋಡೆ ಸಂದರ್ಭ ಈತನ ಜತೆಯಾಗಿದ್ದವನ ಪತ್ತೆಗೆ ಪೆÇಲೀಸರು ಶೋಧ ಮುಂದುವರಿಸಿದ್ದಾರೆ. ಬಂಧಿತನಿಂದ ಪಿಸ್ತೂಲ್ ವಶಕ್ಕೆ ಪಡೆಯಲಾಗಿದ್ದರೂ ಅದು ಮಕ್ಕಳ ಆಟಿಕೆಯ ಪಿಸ್ತೂಲ್ ಎಂದು ಪೆÇಲೀಸರು ತಿಳಿಸಿದ್ದಾರೆ.

ಕಾಸರಗೋಡು ವಿದ್ಯಾನಗರ ಪೆÇಲೀಸ್ ಠಾಣೆಯಲ್ಲಿ ಬದ್ರುದ್ದೀನ್ ವಿರುದ್ಧ ನಾಲ್ಕು ಕೇಸುಗಳಿವೆ.ಮಹಾರಾಷ್ಟ್ರದಿಂದ ಕೊಚ್ಚಿಗೆ ಸರಕು ಸಾಗಿಸುತ್ತಿದ್ದ ಲಾರಿಯನ್ನು ಉಪ್ಪಳ ಪೆಟ್ರೋಲ್ ಬಂಕ್ ಸಮೀಪ ನಿಲ್ಲಿಸಿ ಚಾಲಕ ಮುರುಗಪ್ಪ ಹಾಗೂ ಕ್ಲೀನರ್ ವಿಶ್ರಾಂತಿ ಪಡೆಯುತ್ತಿದ್ದರು. ಈ ಸಂದರ್ಭ ಬೈಕಲ್ಲಿ ಆಗಮಿಸಿದ ಇಬ್ಬರು ಯುವಕರು ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿ ನಗದು ಮತ್ತು ಎರಡು ಮೊಬೈಲ್ ದರೋಡೆಗೈದಿರುವುದಾಗಿ ದೂರಲಾಗಿತ್ತು

ಚಾಲಕನ ದೂರಿನಂತೆ ಪೆÇಲೀಸರು ಇಬ್ಬರ ವಿರುದ್ಧ ಕೇಸು ದಾಖಲಿಸಿ ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.