`ಒಂದು ಮೊಟ್ಟೆಯ ಕಥೆ’ ಟ್ರೈಲರ್ ರಿಲೀಸ್

ವಿಚಿತ್ರ ಹಾಗೂ ವಿಭಿನ್ನ ಶೀರ್ಷಿಕೆಯ ಸಿನಿಮಾ `ಒಂದು ಮೊಟ್ಟೆಯ ಕಥೆ’ ಈ ಮೊದಲೇ ತನ್ನ ಪೆÇೀಸ್ಟರಿನಿಂದಲೇ ಸಿನಿ ರಸಿಕರ ಕುತೂಹಲ ಕೆರಳಿಸಿತ್ತು. ಈಗ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. `ಲೂಸಿಯಾ’, `ಯು ಟರ್ನ್’ ಚಿತ್ರಗಳ ಮೂಲಕ ನಿರ್ದೇಶಕರಾಗಿ ಜನಮನ ಗೆದ್ದ ಪವನ್ ಕುಮಾರ್ ನಿರ್ಮಾಣದ `ಒಂದು ಮೊಟ್ಟೆಯ ಕಥೆ’ ತಲೆ ಮೇಲೆ ಕೂದಲು ಇಲ್ಲದವರ ಕುರಿತಾಗಿರುವ ಒಂದು ತಮಾಷೆಯ ಚಿತ್ರ. ರಾಜ್ ಬಿ.ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾವನ್ನು ಮಂಗಳೂರು ಸುತ್ತಮುತ್ತಲಲ್ಲಿ, ಇಲ್ಲಿ ಜನರಾಡುವ ಭಾಷೆಯಲ್ಲಿಯೇ ಚಿತ್ರೀಕರಿಸಲಾಗಿದೆ.

ವಿಶೇಷವೆಂದರೆ ಈ ಸಿನಿಮಾ ಈಗಾಗಲೇ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ಲಿಗೆ ಆಯ್ಕೆ ಆಗಿದ್ದು, ಮೇ 6 ರಂದು ನ್ಯೂಯಾರ್ಕಿನಲ್ಲಿ ಪ್ರಥಮ ಪ್ರದರ್ಶನ ಕಾಣುತ್ತಿದೆ. ಅಲ್ಲದೇ ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ಲಿನಲ್ಲಿಯೂ ಪ್ರದರ್ಶನಕ್ಕೆ ಅವಕಾಶ ಗಿಟ್ಟಿಸಿಕೊಂಡಿದ್ದು ಈ ಚಿತ್ರದ ಇನ್ನೊಂದು ಹೆಗ್ಗಳಿಕೆ.