ಸಿನಿಮೀಯ ರೀತಿ ಓಮ್ನಿ ಪಲ್ಟಿ : ಇಬ್ಬರು ಆಸ್ಪತ್ರೆಗೆ

ಮಾರ್ಗಮಧ್ಯೆ ಪಲ್ಟಿಯಾದ ಓಮ್ನಿ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಅತ್ತೂರು ಪರ್ಪಲೆಗುಡ್ಡದಲ್ಲಿ ಓಮ್ನಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸಿನಿಮೀಯ ರೀತಿಯಲ್ಲಿ ನಡುರಸ್ತೆಯಲ್ಲೇ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಕಾಪುವಿನ ನಯಾಜ್ (19) ಮತ್ತು ಜಿಯಾದ್ (18) ಗಾಯಗೊಂಡವರು. ತಂಪು ಪಾನೀಯ ಲೈನ್ ಸೇಲಿಗಾಗಿ ಕಾರ್ಕಳಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಓಮ್ನಿ ಚಾಲಕನ ಅತೀ ವೇಗದ ಚಾಲನೆಯಿಂದ ಈ ದುರ್ಘಟನೆ ನಡೆದಿದ್ದು, ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಪತ್ರಕರ್ತರು ಪವಾಡಸದೃಶ ಪಾರು

ವರದಿಗಾಗಿ ಬೈಕಿನಲ್ಲಿ ತೆರಳುತ್ತಿದ್ದ ಕಾರ್ಕಳದ ಇಬ್ಬರು ಪತ್ರಕರ್ತರು ಪರ್ಪಲೆಗುಡ್ಡ ಬಳಿ ತರಳುತ್ತಿದ್ದಾಗ ಸಿನಿಮೀಯ ಶೈಲಿಯಲ್ಲಿ ಓಮ್ನಿ ಪಲ್ಟಿಯಾಗಿ ಹರಿದು ಬರುತ್ತಿರುವುದನ್ನು ಗಮನಿಸಿದ್ದು, ತಾವು ಚಲಾಯಿಸುತ್ತಿದ್ದ ಬೈಕನ್ನು ಚರಂಡಿಗೆ ಇಳಿಸಿದ ಪರಿಣಾಮ ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಪತ್ರಕರ್ತರು ತೆರಳಿ ಗಾಯಗೊಂಡವರನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.