ಓಮ್ನಿ ಚರಂಡಿಗೆ

ಚರಂಡಿಗೆ ಬಿದ್ದ ಓಮ್ನಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೊರವಲಯದ ಉಳ್ಳಾಲ ಬಳಿ ಓಮ್ನಿ ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಅಪಫಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಘಟನೆ ಬಳಿಕ ಓಮ್ನಿ ಚರಂಡಿಗೆ ಬಿದ್ದಿದೆ.

ಉಳ್ಳಾಲದಿಂದ ಬರುತ್ತಿದ್ದ ಸ್ಕೂಟರಿಗೆ ಓಮ್ನಿ ಡಿಕ್ಕಿ ಹೊಡೆದು ಹತೋಟಿ ತಪ್ಪಿ ಸ್ಕೂಟರನ್ನು ಎಳೆದೊಯ್ದು ಸಮೀಪದ ಹೊಂಡಕ್ಕೆ ಓಮ್ನಿ ಉರುಳಿದೆ. ಘಟನೆಯಲ್ಲಿ ಓಮ್ನಿ ಹಾಗೂ ಸ್ಕೂಟರಿನಲ್ಲಿದ್ದ ಇಬ್ಬರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ತೊಕ್ಕೊಟ್ಟು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಯಾವುದೇ ಠಾಣೆಯಲ್ಲಿ ದೂರು ದಾಖಲಾಗಿಲ್ಲ.