ನೀರಿನ ಟ್ಯಾಂಕಲ್ಲಿ ವೃದ್ದೆ ಶವ ಪತ್ತೆ

ಸಾಂದರ್ಭಿಕ ಚಿತ್ರ

ಮಂಗಳೂರು : ವೃದ್ಧೆಯೊಬ್ಬರ ದೇಹ ನಿಗೂಢ ಸ್ಥಿತಿಯಲ್ಲಿ ನೀರಿನ ಟ್ಯಾಂಕಿಯಲ್ಲಿ ಪತ್ತೆಯಾಗಿದೆ. ಮೃತಪಟ್ಟವರನ್ನು 74ರ ಹರೆಯದ ಜಪ್ಪಿನಮೊಗರು ಲಯನ್ಸ್ ಕ್ಲಬ್ ಬಳಿಯ ನಿವಾಸಿ ದೇವಕಿ ಶೆಟ್ಟಿ ಎಂದು ಗುರುತಿಸಲಾಗಿದೆ.ಕÀಂಕನಾಡಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಶವದ ಮಹಜರು ನಡೆಸಿದರು. ಟ್ಯಾಂಕಿನೊಳಗೆ ಬಿದ್ದ ಯಾವುದೋ ವಸ್ತುವನ್ನು ಹೊರತೆಗೆಯಲೆಂದು ಇವರು ಟ್ಯಾಂಕಿಗೆ ಬಾಗಿದಾಗ ಆಯತಪ್ಪಿ ಅದರೊಳಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಟ್ಯಾಂಕಿ ಪಕ್ಕದಲ್ಲೇ ಚಿಕ್ಕ ಸ್ಟೂಲ್ ಕೂಡಾ ಇಟ್ಟಿರುವುದು ಕಂಡು ಬಂದಿದೆ.

ದೇವಕಿ ಅವರು ಮನೆಯಲ್ಲಿ ಚೆನ್ನಾಗಿಯೇ ಇದ್ದು ಎಲ್ಲಾ ಕೆಲಸ ಕಾರ್ಯಗಳನ್ನೂ ಮಾಡಿಕೊಂಡಿದ್ದರು. ಆದರೆ ಇತ್ತೀಚೆಗೆ ಇವರು `ನನಗೆ ವಯಸ್ಸಾಯಿತು. ಇನ್ಮೇಲೆ ನಿಮಗೇಕೆ ಕಷ್ಟ ಎಂದು ಹೇಳಿಕೊಂಡಿದ್ದರು ಎಂದು ಪರಿಸರದವರು ಹೇಳಿದ್ದಾರೆ. .

ಆಕೆಯನ್ನು ಮನೆ ಮಂದಿ ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ರಾತ್ರಿ 10 ಗಂಟೆಗೆ ಎಲ್ಲರೊಂದಿಗೂ ಊಟ ಮಾಡಿ ಮಲಗಿದ್ದ ಇವರು ಮರುದಿನ ಮುಂಜಾನೆ ನಾಪತ್ತೆಯಾಗಿದ್ದು, ಶವ ನೀರಿನ ಟ್ಯಾಂಕಿನೊಳಗೆ ಕಂಡುಬಂದಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.