ಇಬ್ಬರು ಮಹಿಳೆ, 6 ಮಕ್ಕಳಿಗೆ ಆ್ಯಸಿಡ್ ಎರಚಿ ಗಾಯಗೊಳಿಸಿದ 70ರ ವೃದ್ಧ

ಸಾಂದರ್ಭಿಕ ಚಿತ್ರ

ನವದೆಹಲಿ :  ದಿಲ್ಲಿಯ ಭರತ್ ನಗರದಲ್ಲಿ ಇಬ್ಬರು ಮಹಿಳೆಯರು ಮತ್ತು ಆರು ಮಂದಿ ಮಕ್ಕಳಿಗೆ ಆ್ಯಸಿಡ್ ಎರಚಿ ಗಾಯಗೊಳಿಸಿದ 70ರ ವೃದ್ಧನೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

ಅಪರಾಹ್ನ 2 ಗಂಟೆಯ ಹೊತ್ತಿಗೆ ಕೆಲವು ಮಕ್ಕಳು ವಿನೋದ್ ಮನೆ ಮಂದೆ ಕುಣಿದಾಡುತ್ತಿದ್ದಾಗ, ಬೇರೆಡೆಗೆ ಹೋಗುವಂತೆ ಸೂಚಿಸಿದ. ಆದರೆ ಮಕ್ಕಳು ಅಲ್ಲೇ ಕುಣಿತ ಮುಂದುವರಿಸಿದರು. ಇದರಿಂದ ಕುಪಿತಗೊಂಡ ವಿನೋದ್ ಫಿನೋಲ್ ಎರಚಿದ್ದಾನೆ ಎನ್ನಲಾಗಿದೆ. ಮಕ್ಕಳನ್ನು ರಕ್ಷಿಸಲು ಅಂಕಿತ್ ತಾಯಿ ಬಬಿತಾ ಮತ್ತು ಆಕೆಯ ಗೆಳತಿ ಬಬ್ಲಿ ಕೂಡಾ ಗಾಯಗೊಂಡಿದ್ದಾರೆ.

ಸುಟ್ಟ ಗಾಯಗಳಾಗಿರುವ ಅಂಕಿತ್, ಸುರೇಶ್, ಸೂರಜ್, ಆದರ್ಶ, ಕಮಲ್ ಕರಣ್, ಬಬಿತಾ ಮತ್ತು ಬಬ್ಲಿಯನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ.

“ಇಲ್ಲಿನ ಶಕ್ತಿನಗರ ಪ್ರದೇಶದಲ್ಲಿ ವೃದ್ಧನೊಬ್ಬ ಕೆಲವರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ ಎಂಬ ಮಾಹಿತಿ ಲಭಿಸಿತು. ಫಿನೋಲ್ ಎರಚಲಾಗಿದೆ ಎಂಬ ಹೇಳಿಕೆಗೆ ಮೇರೆಗೆ ಪೊಲೀಸ್ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.