ರಸ್ತೆ ಬದಿಯಲ್ಲಿ ಹಳೇ ಇಂಟರಲಾಕ್ ರಾಶಿ

ನಮ್ಮ ಸರಕಾರವು ಸ್ವಚ್ಛ ಭಾರತ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಾನಾ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ನಗರಪಾಲಿಕೆ ಸಿಬ್ಬಂದಿಗಳು ಇದರಲ್ಲಿ ಪಾಲ್ಗೊಂಡಿರುತ್ತಾರೆ. ತಂಬಾಕು, ಜರ್ದಾ, ಮಾರುತಿ ಮುಂತಾದ ಜಗಿದು ತಿಂದು ಉಗುಳುವ ಪ್ಯಾಕೆಟುಗಳು ರಸ್ತೆ ಬದಿಯ ಅಂಗಡಿಗಳಲ್ಲಿ ಮಾರಾಟಕ್ಕಿದೆ. ಪ್ರಥಮವಾಗಿ ಇದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ರಸ್ತೆ ಬದಿ ಎಷ್ಟು ಶುಚಿತ್ವ ಮಾಡಿಕೊಂಡರೂ ಮರುದಿನ ರಸ್ತೆಯಲ್ಲಿ ಖಾಲಿ ಪ್ಯಾಕೇಟುಗಳ ರಾಶಿ ರಾರಾಜಿಸುತ್ತಿದೆ. ತಿಂದು ರಸ್ತೆ ಬದಿಯಲ್ಲಿ ಬಿಸಾಡುವ ದೃಶ್ಯಗಳನ್ನು ಕಾಣಬಹುದು. ಸಮೀಪದ ನೆರೆಯ ಕೇರಳ ರಾಜ್ಯದಲ್ಲಿ ಈ ತ್ಯಾಜ್ಯಗಳನ್ನು ನಿಷೇಧಿಸಿದಂತೆ ಕರ್ನಾಟಕ ಜಿಲ್ಲೆಯಲ್ಲೂ ಕಡ್ಡಾಯವಾಗಿ ನಿಷೇಧಿಸಬೇಕು.
ಇನ್ನು ನಮ್ಮ ನಗರಪಾಲಿಕೆ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಹೊಸ ಇಂಟರ್‍ಲಾಕ್‍ಗಳನ್ನು ಅಳವಡಿಸಿದ ಸಂದರ್ಭದಲ್ಲಿ ಹಳೇ ಇಂಟರಲಾಕ್ ತೆಗೆದು ರಸ್ತೆ ಬದಿಯಲ್ಲಿಯೇ ಇಟ್ಟಿರುವ ದೃಶ್ಯಗಳನ್ನು ಕಾಣಬಹುದಾಗಿದೆ. ಇದನ್ನು ಈ ರಸ್ತೆಯ ಗುತ್ತಿಗೆದಾರರು ಅದನ್ನು ಅಲ್ಲಿಂದ ಇತರಡೆಗೆ ಸಾಗಿಸುವ ಕೆಲಸ ಮಾಡುವುದಿಲ್ಲ. ಅದು ಎಷ್ಟು ಸಮಯ ಹೋದರೂ ಅಲ್ಲೇ ಬಿದ್ದಿಕೊಂಡಿರುತ್ತದೆ. ರಸ್ತೆಯ ಅಂಚಿನಲ್ಲಿ ಬಿದ್ದ ಇಂಟರಲಾಕ್ ಬ್ಲಾಕುಗಳಿಂದ ರಸ್ತೆಯ ಅಂದ ಚೆಂದ ಕೆಡುತ್ತಿದೆ

  • ಟಿ ಅರ್ಥರ್ ಮೆಂಡೋನ್ಸಾ  ಪುತ್ತೂರು