ಪ್ರಯಾಣಿಕೆಗೆ ಲ್ಯೆಂಗಿಕ ಕಿರುಕುಳ : ಓಲಾ ಟ್ಯಾಕ್ಸಿ ಚಾಲಕ ಅಮಾನತು

ಬೆಂಗಳೂರು : ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಓಲಾ ಟ್ಯಾಕ್ಸಿಯ ಚಾಲಕನೊಬ್ಬನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಮಹಿಳೆ ತನ್ನ ಮನೆಗೆ ಸಾಗುತ್ತಿದ್ದಾಗ ಓಲಾ ಕಾರಿನ ಚಾಲಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಬಗ್ಗೆ ಮಹಿಳೆ ಓಲಾ ಕ್ಯಾಬ್ಸ್ ಸುರಕ್ಷಾ ತಂಡಕ್ಕೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. “ಪ್ರಯಾಣಿಕರ ಸುರಕ್ಷತೆಯೇ ನಮ್ಮ ಧ್ಯೇಯ” ಎಂದು ಓಲಾ ಹೇಳಿದೆ.