ಪೆಟ್ರೋಲ್ ಪಂಪುಗಳಲ್ಲೂ ಇನ್ನು ಓಲಾ ಮನಿ ಬಳಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದೇಶದಲ್ಲಿ 500 ಹಾಗೂ 1000 ರೂಪಾಯಿ ನೋಟು ಅಮಾನ್ಯದಿಂದ ಉದ್ಬವಿಸಿರುವ ನಗದು ಕೊರತೆ ಹಿನ್ನೆಲೆಯಲ್ಲಿ ಓಲಾ ಮನಿ ಡಿಜಿಟಲ್ ಪೇಮೆಂಟ್ ಸೊಲ್ಯೂಶನ್, ಪೆಟ್ರೋಲ್ ಪಂಪುಗಳಲ್ಲಿ ಓಲಾ ಮನಿ ಬಳಕೆ ಮಾಡಲು ಅವಕಾಶ ನೀಡುವ ಸಂಬಂಧ ಎಚ್ ಪಿ ಸಿ ಎಲ್ ಹಾಗೂ ಇಂಡಿಯನ್ ಆಯಿಲ್ ಜತೆ ಒಪ್ಪಂದ ಮಾಡಿಕೊಂಡಿದೆ.

ಇದರ ಅನ್ವಯ ದೇಶದ ಎಲ್ಲ 20 ಸಾವಿರ ಎಚ್ ಪಿ ಸಿ ಎಲ್ ಹಾಗೂ ಐ ಓ ಸಿ ಲ್ ಪೆಟ್ರೋಲ್ ಪಂಪುಗಳಲ್ಲಿ ಪೆಟ್ರೋಲಿಯಂ ಉತ್ಪನ್ನ ಖರೀದಿಸಲು ಓಲಾ ಮನಿ ಮೂಲಕ ಪಾವತಿ ಮಾಡಬಹುದಾಗಿದೆ. ಇದೀಗ ಬಳಕೆದಾರರು ವೆರಿಫೋನ್ ಅವಕಾಶ ಇರುವ ಪಿ ಓ ಎಸ್ ಸಾಧನಗಳ ಮೂಲಕ ಫಾವತಿ ಮಾಡಬಹುದಾಗಿದೆ.

“ದೇಶದಲ್ಲಿ ಶೇಕಡ 70ರಷ್ಟು ಪೆಟ್ರೋಲ್ ಪಂಪುಗಳು ಈ ಎರಡು ಕಂಪನಿಯದ್ದಾಗಿದ್ದು, ಇದರಿಂದ ಬಹುತೇಕ ಎಲ್ಲ ವಾಹನ ಚಾಲಕರಿಗೆ ಈ ಸೌಲಭ್ಯ ಸಿಕ್ಕಿದಂತಾಗಿದೆ” ಎಂದು ಓಲಾ ಮನಿ ಮುಖ್ಯಸ್ಥ ಪಲ್ಲವ್ ಸಿಂಗ್ ಹೇಳಿದ್ದಾರೆ.