ಚಾಲಕರಿಗೆ ವೈದ್ಯಕೀಯ ನೆರವು

ಮಂಗಳೂರು : ಅಪೋಲೊ ಆಸ್ಪತ್ರೆ ಜತೆ ಒಪ್ಪಂದ ಮಾಡಿಕೊಂಡು ಎಲ್ಲ ಚಾಲಕ ಭಾಗಿದಾರರಿಗೆ ಸಮಗ್ರ ವೈದ್ಯಕೀಯ ನೆರವನ್ನು ಒದಗಿಸಲಿಸುವ ಕ್ರಾಂತಿಕಾರಿ, ಲೈಫ್ ಸೇವರ್ ಯೋಜನೆಯನ್ನು ಓಲಾ ಪ್ರಕಟಿಸಿದೆ.

ಓಲಾ ಚಾಲಕರಿಗೆ ತುರ್ತು ಸಂದರ್ಭಗಳಲ್ಲಿ ಈ ಮೂಲಕ ವೈದ್ಯಕೀಯ ನೆರವು ಸಿಗಲಿದೆ. ಚಾಲಕ ಭಾಗಿದಾರರು ಇದರ ಜೊತೆಗೆ ಮೈ ಅಪೊಲೊ ಕಾರ್ಡ್ ಪಡೆಯಲಿದ್ದು, ಈ ಮೂಲಕ ಹಲವು ವೈದ್ಯಕೀಯ ಅನುಕೂಲತೆಗಳನು ಪಡೆಯಲಿದ್ದಾರೆ. ಜತೆಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ, ಅಪಘಾತ ವಿಮೆ ಸೌಲಭ್ಯ ಸಿಗಲಿದೆ. ಅಪೊಲೊ ಮುನಿಚ್ ಇವರಿಗೆ ಅಪಘಾತ ವಿಮೆ ಮತ್ತು ರಿಯಾಯಿತಿ ದದಲ್ಲಿ ಚಿಕಿತ್ಸೆ ಒದಗಿಸಲಿದೆ ಎಂದು ಓಲಾದ ಸಿಒಒ ಪ್ರಣಯ್ ಜಿವರಾಜಕಾ ಹೇಳಿದ್ದಾರೆ.

ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿರುವ 5.5 ಲಕ್ಷ ಓಲಾ ಚಾಲಕ ಪಾಲುದಾರರಿಗೆ ಇದು ಅನ್ವಯವಾಗಲಿದೆ. ಅಪಘಾತದಂಥ ಸಂದರ್ಭದಲ್ಲಿ ಇದು ಜೀವರಕ್ಷಕ ಕ್ರಮವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ಪಡಿಸಿದ್ದಾರೆ. ಅಪಘಾತದಂಥ ತುರ್ತು ಸಂದರ್ಭದಲ್ಲಿ ಹೇಗೆ ಸ್ಪಂದಿಸಬೇಕು ಎಂಬ ಬಗ್ಗೆ ಚಾಲಕರಿಗೆ ಸೂಕ್ತ ತರಬೇತಿಯನ್ನೂ ನೀಡಲಾಗುವುದು. ಎಲ್ಲ ಓಲಾ ವಾಹನಗಳಲ್ಲಿ ತುರ್ತು ವೈದ್ಯಕೀಯ ಕಿಟ್ ಕೂಡಾ ಅಳವಡಿಸಲಾಗುವುದು ಮತ್ತು ಅವರಿಗೆ ಸಿಪಿಆರ್, ಹೃದಯಾಘಾತ, ಪಾಶ್ರ್ವವಾಯು ನಿರ್ವಹಣೆ ಕುರಿತು ತರಬೇತಿ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.