ಜಿಲ್ಲಾಧಿಕಾರಿ ವರ್ಗಾವಣೆಗೆ ಸಸಿನೆಟ್ಟು ಸಂಭ್ರಮಿಸಿದರು !

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಡಾ ಕೆ ಜಿ ಜಗದೀಶ್ ಅವರು ಪರಿಸರ ಕಾಳಜಿ ಹೊಂದಿರಲಿಲ್ಲ ಹಾಗೂ ಮರಳು ಮಾಫಿಯಾವನ್ನು ಮಟ್ಟ ಹಾಕುವಲ್ಲಿ ಸಂಫೂರ್ಣ ವಿಫಲರಾಗಿದ್ದರು ಎಂದು ಆರೋಪಿಸಿ, ಜಿಲ್ಲಾಧಿಕಾರಿ ವರ್ಗಾವಣೆಯ ಸಂಭ್ರಮದಲ್ಲಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲೇ ಸಸಿ ನೆಟ್ಟು ಸಂಭ್ರಮಿಸಿದೆ.

ಒಕ್ಕೂಟದ ಕಾರ್ಯದರ್ಶಿ ಶಶಿಧರ ಶೆಟ್ಟಿ ಮಾತನಾಡಿ “ಮರಳು ಮಾಫಿಯಾವನ್ನು ಮಟ್ಟ ಹಾಕುವಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ

ವರ್ಗಾವಣೆಗೊಂಡ ಜಗದೀಶ್ ಸಂಪೂರ್ಣ ವಿಫಲರಾಗಿದ್ದಾರೆ. ಜಿಲ್ಲೆಯ ಬೆಳವಣಿಗೆಗೆ ತಮ್ಮ ಶ್ರಮವನ್ನು ಮೀಸಲಿಡಬೇಕಾಗಿತ್ತು. ಆದರೆ ಅವರ ನಿರ್ಲಕ್ಷ್ಯ ಧೋರಣೆ ಮತ್ತು ಮೊಂಡುತನದಿಂದ ಜಿಲ್ಲೆಯ ಜನರಿಂದ ದೂರವಾಗಿದ್ದರು. ಅವರ ಬೀಳ್ಕೊಡುಗೆ ಹಿನ್ನೆಲೆಯಲ್ಲಿ ಸನ್ಮಾನಿಸುವ ಬದಲು ನಾವು ಗಿಡ ನೆಟ್ಟು ಸಂಭ್ರಮಿಸಬೇಕಾಗಿದೆ ಎಂದು ಹೇಳಿದರು.

ಪರಿಸರ ಹೋರಾಟಗಾರ ದಿನೇಶ್ ಹೊಳ್ಳ, ರೋಜಿ ಮರಿಯಾ ಡಿಸೋಜ, ಲೋಹಿತ್, ಪ್ರವೀಣ್ ಮೊದಲಾದವರಿದ್ದರು.