ಅಧಿಕಾರಿಗಳಿಂದ ಟೂರಿಸ್ಟ್ ಬಸ್ಸುಗಳಿಗೆ ಅಂಕುಶ ವಿಫಲ

ವಿಶೇಷ ವರದಿ

ಮಂಗಳೂರು : ನಗರದ ರಸ್ತೆಗಳಲ್ಲಿ ಅದಕ್ಕೂ ಹೆಚ್ಚಾಗಿ ಪಿವಿಎಸ್ ವೃತ್ತದ ಸಮೀಪ ಖಾಸಗಿ ಟೂರಿಸ್ಟ್ ಬಸ್ಸುಗಳ ಆಟಾಟೋಪ ನಿಂಯತ್ರಿಸಲು ಮಂಗಳೂರು ನಗರ ಪೆÇಲೀಸ್ ಅಧಿಕಾರಿಗಳು ವಿಫಲವಾಗಿದ್ದು, ಸ್ವತಃ ನಗರ ಪೆÇಲೀಸ್ ಆಯುಕ್ತ ಚಂದ್ರಶೇಖರ್ ಅವರೇ ಕಣಕ್ಕಿಳಿಯ ಬೇಕಾದ ಅನಿವಾರ್ಯತೆ ಎದುರಾಗಿದೆ.

ಇತ್ತೀಚೆಗೆ ಈ ಖಾಸಗಿ ಬಸ್ ಮಾಫಿಯಾದ ಚಾಲಕರ ದುರಂಹಕಾರದಿಂದಾಗಿ ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಪಿವಿಎಸ್ ವೃತ್ತದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಮುಂದೆ ಹೋಗಲಾಗದ ಅಂಬ್ಯುಲೆನ್ಸ್ ಚಾಲಕ ವಾಹನವನ್ನು ವಾಪಸ್ ತಿರುಗಿಸಿ ಬೇರೆ ದಾರಿ ಮೂಲಕ ಆಸ್ಪತ್ರೆ ತಲುಪುವ ಪ್ರಯತ್ನ ನಡೆಸಿದ್ದ.

ಅದಕ್ಕೂ ಮುನ್ನ ಹಲವು ಬಾರಿ ಇಲ್ಲಿ ರಾಜ್ಯದ ಆಡಳಿತರೂಢ ಪಕ್ಷದ ಕೃಪಾಕಟಾಕ್ಷ ಹೊಂದಿರುವ ವಿರೋಧ ಪಕ್ಷದ ಮುಖಂಡರ ಮಾಲಿಕತ್ವದ ಹಾಗೂ ನಗರದಲ್ಲಿ ಅನೈತಿಕ ರೌಡಿಸಂ ಕೀಟಲೆ ಮಾಡುವ ಹಿನ್ನೆಲೆಯವರನ್ನು ನೌಕರರನ್ನಾಗಿ ಹೊಂದಿರುವ ಖಾಸಗಿ ಬಸ್ಸುಗಳ ಅವಾಂತರಗಳ ಬಗ್ಗೆ ಹಲವು ದೂರುಗಳು ಬರುತ್ತಲೇ ಇದ್ದರೂ ಯಾವ ಕಾನೂನು ಕ್ರಮವೂ ಜರುಗಿಲ್ಲ.

ಈ ಮಧ್ಯೆ, ಕಳೆದ ಮೂರು ದಿನಗಳಿಂದ ನಗರ ಪೆÇಲೀಸ್ ಕ್ರೈಮ್ ಮತ್ತು ಟ್ರಾಫಿಕ್ ಡಿಸಿಸಿ ಸಂಜೀವ್ ಪಾಟೀಲ್ ಅವರು ಪಿವಿಎಸ್ ವೃತ್ತದಲ್ಲಿ ವಾಹನ ಸಂಚಾರಕ್ಕೆ ತೊಂದರೆ ಆಗುವ ರೀತಿಯಲ್ಲಿ ಟೂರಿಸ್ಟ್ ಬಸ್ಸುಗಳು ಪ್ರಯಾಣಿಕರನ್ನು ಬಸ್ಸಿಗೆ ಹತ್ತಿಸಿಕೊಳ್ಳಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮಾತ್ರವಲ್ಲದೆ, ಇನ್ಸಪೆಕ್ಟರ್ ಮಟ್ಟದ ಅಧಿಕಾರಿಗಳನ್ನು ಕೂಡ ನಿಯೋಜಿಸಿದ್ದಾರೆ. ಆದರೆ, ನಿರೀಕ್ಷಿತ ಪರಿಣಾಮ ಮಾತ್ರ ಕಾಣುತ್ತಿಲ್ಲ.

ಮಂಗಳೂರು ನಗರದಲ್ಲಿ ಯಾವುದೇ ಹೊಸ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕಾದರೆ ಸ್ವತ ಪೆÇಲೀಸ್ ಕಮೀಷನರ್ ಚಂದ್ರಶೇಖರ್ ಅವರೇ ಕಣಕ್ಕಿಳಿಯುವ ಅನಿವಾರ್ಯತೆ ಇದೆ. ಡಿಸಿಪಿ ಮಟ್ಟದ ಅಧಿಕಾರಿಗಳು ತಮ್ಮ ಕೈಕೆಳಗಿನ ಅಧಿಕಾರಿಗಳಲ್ಲಿ ವಿಶ್ವಾಸವಿರಿಸಿ ಅನುಷ್ಠಾನದ ಹೊಣೆಗಾರಿಕೆಯನ್ನು ನೀಡುತ್ತಾರೆ. ಈ ಅಧಿಕಾರಿಗಳು ಕೂಡ ಹಿರಿಯ ಅಧಿಕಾರಿಗಳ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಆದರೆ, ಅನುಷ್ಠಾನದ ವೇಳೆ ಆಗುವ ಲೋಪ ದೋಷಗಳನ್ನು ಮಾತ್ರ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಿಲ್ಲ.

ಖಾಸಗಿ ಟೂರಿಸ್ಚ್ ಬಸ್ಸುಗಳ ಚಾಲಕರು ಕಾನೂನು ಎಂಬ ಚಾಪೆಯಡಿ ನುಸುಳುವಲ್ಲಿ ಯಶಸ್ವಿಯಾಗಿದ್ದಾರೆ. ತಳಮಟ್ಟದ ಅಧಿಕಾರಿಗಳು ಕೂಡ ಅಷ್ಟೇ. ತಮಗೆ ನೀಡಲಾದ ಕೆಲಸವನ್ನು ಚಾಚೂ ತಪ್ಪದೆ ಶಿರಸಾವಹಿಸಿ ಮಾಡಿದ್ದಾರೆ. ಫಲಿತಾಂಶ ಮಾತ್ರ ಶೂನ್ಯ.

ಬಿಜೈಯಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಪಿವಿಎಸ್ ವೃತ್ತದಿಂದ ಮಹೇಂದ್ರ ಅರ್ಕೇಡ್ ತನಕ ಖಾಸಗಿ ಟೂರಿಸ್ಚ್ ಬಸ್ಸುಗಳ ಕಾನೂನು ಬಾಹಿರ ವರ್ತನೆಗೆ ಅಂತ್ಯ ಹಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಕಾನೂನು ಪರವಾಗಿ ನಿಲ್ಲಬೇಕಾಗಿದೆ.