ಅಮಾನ್ಯ ನೋಟು ಸಹಿತ ಅಧಿಕಾರಿ ಎಸಿಬಿ ಬಲೆಗೆ

ಕಚೇರಿಯಲ್ಲಿ ಕಡತಗಳ ಜಾಲಾಡುತ್ತಿರುವ ಅಧಿಕಾರಿಗಳು

ಕೊಟ್ಟಾರದಲ್ಲಿರುವ ಕೈಗಾರಿಕಾ ಸುರಕ್ಷತಾ

ವಿಭಾಗೀಯ ಕಚೇರಿಗೆ ಪೊಲೀಸ್ ದಾಳಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಲಂಚದ ಹಣ ಇರಿಸಿಕೊಂಡಿದ್ದ ಅಧಿಕಾರಿಯ ಮನೆ ಮತ್ತು ಕಚೇರಿಗೆ ಮಂಗಳೂರಿನ ಎಸಿಬಿ ಪೆÇಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ನಗರದ ಕೊಟ್ಟಾರದಲ್ಲಿರುವ ಕರ್ನಾಟಕ ಸರಕಾರದ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಮಂಗಳೂರಿನ ಕೈಗಾರಿಕಾ ಸುರಕ್ಷತಾ ವಿಭಾಗೀಯ ಕಚೇರಿ ಅಸಿಸ್ಟೆಂಟ್ ಡೈರೆಕ್ಟರ್ ಎಚ್ ಸುರೇಶ್ ನಗದು ಹಣದ ಸಹಿತ ಸಿಕ್ಕಿಬಿದ್ದ ಅಧಿಕಾರಿ.

ಮನೆ ಮತ್ತು ಕಚೇರಿಯಲ್ಲಿ ಸುಮಾರು 3.5 ಲಕ್ಷ ರೂಪಾಯಿ ನಗದು ಪತ್ತೆಯಾಗಿದ್ದು, ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ನಗದಿನಲ್ಲಿ ನಿಷೇಧಕ್ಕೊಳಗಾದ 500, 1000 ನೋಟುಗಳೇ ಹೆಚ್ಚಿದ್ದು, 2000 ರೂಪಾಯಿಯ 77  ನೋಟುಗಳು ಪತ್ತೆಹಚಿದ್ದಾರೆ. ಮಂಗಳೂರಿನ ಕೊಟ್ಟಾರದಲ್ಲಿ ಕಚೇರಿ ಹೊಂದಿರುವ ಅಧಿಕಾರಿ ಸುರೇಶ್ ಈಗಾಗಲೇ ಬೆಂಗಳೂರು ಕಚೇರಿಗೆ ವರ್ಗಾವಣೆ ಪಡೆದುಕೊಂಡಿದ್ದರು.

ಕಚೇರಿಯಿಂದ 1.12 ಲಕ್ಷ ರೂ ಮತ್ತು ಮನೆಯಿಂದ 3 ಲಕ್ಷ ರೂ ಅಕ್ರಮ ಹಣವನ್ನು ಪೊಲಿಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಸುರೇಶ್ ಇಂದು ಮಂಗಳೂರಿನ ಕಚೇರಿಯಿಂದ ನಿರ್ಗಮಿಸುವರಿದ್ದರು. ಆದರೆ ಈ ಮಧ್ಯೆ ಎಸಿಬಿ ಪೆÇಲೀಸರು ಸಾಮಾಜಿಕ ಕಾರ್ಯಕರ್ತ ಹನುಮಂತ್ ಕಾಮತ್ ದೂರಿನ ಮೇರೆಗೆ ದಾಳಿ ನಡೆಸಿದ್ದು, ಅಧಿಕಾರಿಯ ಮನೆಯಲ್ಲಿ ಅನಧಿಕೃತ ನಗದನ್ನು ಪತ್ತೆಹಚ್ಚಿದ್ದಾರೆ.