ಉದ್ಯೋಗ ಕೊಡಿಸುವ ಅರ್ಜಿ ಕಳಿಸಲು ಲಂಚದ ಬೇಡಿಕೆಯಿಟ್ಟ ಅಧಿಕಾರಿಗೆ ಶಿಕ್ಷೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಉದ್ಯೋಗಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಎಂಆರ್ಪಿಎಲ್ಲಿನಲ್ಲಿ ಕೆಲಸಕ್ಕೆ ಅರ್ಜಿ ಕಳುಹಿಸಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದ ಅಧಿಕಾರಿಗೆ ನಗರದ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ ಮುರಳೀಧರ ಪೈ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಬಲರಾಮ್ ಎಂಬವರಿಂದ ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದ ಅಧಿಕಾರಿ ಎಸ್ ಡಿ ಬಸವರಾಜಗೆ ಕೋರ್ಟ್ ಈ ಶಿಕ್ಷೆ ಘೋಷಣೆ ಮಾಡಿದೆ. 2010ರ ಸೆಪ್ಟೆಂಬರ್ 8ರಂದು ಆರೋಪಿ ಬಸವರಾಜ್ 5000 ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ. ಆರೋಪಿ ಎಸಗಿದ ಅಪರಾಧಕ್ಕೆ ಒಂದು ವರ್ಷ ಸಾದಾ ಸಜೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

 

LEAVE A REPLY