ಸೇನಾಕಾಂಕ್ಷಿ ಅಭ್ಯರ್ಥಿಗಳ ಸಂಖ್ಯೆ 3 ಪಟ್ಟು ಹೆಚ್ಚಳ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಯುವಕರು ಸೈನ್ಯಕ್ಕೆ ಸೇರಲು ಆಸಕ್ತಿ ತೋರಿಸುತ್ತಿಲ್ಲ ಎಂದು ಸೇನೆ ಅಧಿಕಾರಿಗಳು ನಿರಾಶೆ ತೋರಿಸಿ ಹೆಚ್ಚು ಸಮಯ ಕಳೆದಿಲ್ಲ, ಈ ನಿರಾಶೆ ಹೆಚ್ಚು ಕಾಲ ಉಳಿಯಲಿಲ್ಲ. ಮಂಗಳೂರು ಸೇನಾ ನೇಮಕಾತಿ ವಿಭಾಗದಲ್ಲಿ ಇದೀಗ 7 ಜಿಲ್ಲೆಗಳ ಒಟ್ಟು 19,150 ಅಭ್ಯರ್ಥಿಗಳು ಸೇನೆಗೆ ಸೇರಲು ಅರ್ಜಿ ಸಲ್ಲಿಸಿದ್ದಾರೆ. ಎರಡೂ ಕರಾವಳಿ ಜಿಲ್ಲೆಗಳಲ್ಲಿ ಸೇನಾ ಅಭ್ಯರ್ಥಿಗಳ ಸಂಖ್ಯೆ 3 ಪಟ್ಟು ಹೆಚ್ಚಳಗೊಂಡಿರುವುದಕ್ಕೆ ನೇಮಕಾತಿ ಅಧಿಕಾರಿಗಳು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಸೇನಾ ನೇಮಕಾತಿ ವಿಭಾಗಕ್ಕೆ ವಿಜಯಪುರ, ಬಾಗಲಕೋಟೆ, ಧಾರವಾಡ, ಉತ್ತರ ಕನ್ನಡ, ಉಡುಪಿ, ಹಾವೇರಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಗದಗ ಸೇರಿದಂತೆ 11 ಜಿಲ್ಲೆಗಳಿಂದ ಸುಮಾರು 19,150 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. “11 ಜಿಲ್ಲೆಗಳ ಪ್ರತಿಯೊಂದು ತಾಲೂಕಿನ ಅಭ್ಯರ್ಥಿಗಳು ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ” ಎಂದು ಮಂಗಳೂರು ವಿಭಾಗದ ನೇಮಕಾತಿ ಅಧಿಕಾರಿ ಕೊಲೊನೆಲ್ ಪ್ರಶಾಂತ್ ಪೆಟ್ಕರ್ ಹೇಳಿದ್ದಾರೆ. “ಮಂಗಳೂರು ವಿಭಾಗ 2015ರಲ್ಲಿ ಆನ್ಲೈನ್ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಿದ ಬಳಿಕ ಅರ್ಜಿದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ” ಎಂದು ಅವರು ಹೇಳಿದ್ದಾರೆ.

“ಕಳೆದ 3 ವರ್ಷಗಳಲ್ಲಿ 5 ವಿವಿಧ ಸೇನಾ ವಿಭಾಗಗಳಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಸಂಖ್ಯೆ 3 ಪಟ್ಟು ಹೆಚ್ಚಳವಾಗಿದೆ. 2015ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟೂ 118 ಮಂದಿ ಅರ್ಜಿ ಸಲ್ಲಿಸಿದ್ದರು. 2017ರಲ್ಲಿ ಈ ಸಂಖ್ಯೆ 388ಕ್ಕೆ ಏರಿತ್ತು. ಉಡುಪಿ ಜಿಲ್ಲೆಯ ಅಭ್ಯರ್ಥಿಗಳ ಸಂಖ್ಯೆಯೂ 2015ರಲ್ಲಿ 54 ಇದ್ದದ್ದು, 2016ರಲ್ಲಿ 146ಕ್ಕೆ ಏರಿದೆ. ಇದು ಸಕಾರಾತ್ಮಕ ಬೆಳವಣಿಗೆ” ಎಂದು ಅವರು ಸಂತೃಪ್ತಿಯಿಂದ ಹೇಳಿದ್ದಾರೆ.