ಮಣಿಪಾಲ ರಸ್ತೆ ದುರಸ್ತಿಗೆ ನುಡಿ ಕಾವ್ಯದ ಮನವಿ

ಮೃತ್ಯು ಕಂದಕಗಳ ರಾಷ್ಟ್ರೀಯ ಹೆದ್ದಾರಿ
ವಾಲುತ್ತ ಸಾಗುವ ಬಸ್ಸು ಲಾರಿ
ಬಿದ್ದೇಳುತ ಸಾಗುವ ಬೈಕು ಸವಾರಿ
ನಡೆದಾಡುವಂತಿಲ್ಲ ಪಾದಚಾರಿ
ಬಿದ್ದು ಒದ್ದಾಡುವ ಕೆಲ ಜೀವ
ಸೆಣಸಿ ಬದುಕುವ ಆಶಾಭಾವ
ನೋಡಲಾಗದು ಬೀಭಿತ್ಸ್ಯ ದೃಶ್ಯ
ರಸ್ತೆ ಹೊಂಡಗಳ ಬರ್ಭರ ಕೃತ್ಯ
ರಸ್ತೆಯಲ್ಲಿ ನೆತ್ತರ ಸಂಚಾರ
ಅರಿಯದೆ ಮಾನವಿತೆಯ ಸಾರ
ನೇತಾರರೇ ಹೆದ್ದಾರಿ ದುರಸ್ತಿಗೊಳಿಸಿ
ಜೀವಗಳ ಮೇಲೆ ಕರುಣೆ ತೋರಿಸಿ
ಅರ್ಥೈಸಿಕೊಳ್ಳಿ ನುಡಿ ಕಾವ್ಯದ ಮನವರಿಕೆ
ನಿಮಗಿದೂ ಕಳಕಳಿ ವಿನಂತಿಯ ಕೋರಿಕೆ

  • ತಾರಾನಾಥ್ ಮೇಸ್ತ  ಶಿರೂರು
    ಯುವಕವಿ ಸಾಮಾಜಿಕ ಕಾರ್ಯಕರ್ತ
    7760421868