ಕೆಟ್ಟ , ಹಿತಸ್ಪರ್ಶದ ಬಗ್ಗೆ ಮಕ್ಕಳಿಗೆ ಪಾಠ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಹೆಚ್ಚಿನ ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ತಿಳಿಹೇಳಲು ಸಂಕೋಚಪಡುತ್ತಾರೆ. ಹಾಗಾಗಿ ಮಂಗಳೂರಿನ ಪೋದಾರ್ ಅಂತಾರಾಷ್ಟ್ರೀಯ ಶಾಲೆಯು ಈ ಕೆಲಸವನ್ನು ಮಾಡಲು ಮುಂದೆ ಬಂದಿದೆ. ದೇಶಾದ್ಯಂತ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳು ಈ ಪ್ರಾರಂಭಕ್ಕೆ ಮುಖ್ಯ ಕಾರಣ. “ನಾವು ಮಕ್ಕಳಿಗೆ ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ತಿಳುವಳಿಕೆ ಮೂಡಿಸಲು ಸಣ್ಣ ವಿಡಿಯೋವನ್ನು ರಚಿಸಿದ್ದೇವೆ. ಗುಡ್ ಟಚ್, ಬ್ಯಾಡ್ ಟಚ್ ಎಂಬ ಶೀರ್ಷಿಕೆಯಲ್ಲಿರುವ ಈ ಗೊಂಬೆ ವೀಡಿಯೋ ಮಕ್ಕಳಿಗೆ ಈ ಬಗ್ಗೆ ಪಾಠ ಕಲಿಸುತ್ತದೆ ಮತ್ತು ಈ ಸಂದರ್ಭ ಎದುರಾದಾಗ ಮಕ್ಕಳು ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂಬುದನ್ನು ವಿಡಿಯೋ ತಿಳಿಸುತ್ತದೆ ಎಂದು ಶಾಲಾ ಪ್ರಾಂಶುಪಾಲ ಟಿ ಶ್ರೀನಿವಾಸ ರಾಜು ಹೇಳಿದ್ದಾರೆ.

ಜನವರಿ ಮೊದಲ ವಾರದಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದೆ. ಪೋದಾರ್ ಶಾಲಾ ಮಕ್ಕಳಿಂದ ಈ ವಿಡಿಯೋ ಪ್ರದರ್ಶನ ಆರಂಭವಾಗಲಿದೆ. ಇದುವರೆಗೆ ನಗರದ ಸುಮಾರು 800 ಮಕ್ಕಳನ್ನು ತಪುಪಿದ್ದೇವೆ. ಅಪಾರ್ಟುಮೆಂಟುಗಳಲ್ಲಿ, ಡ್ಯಾನ್ಸ್ ಸ್ಟುಡಿಯೋಗಳಲ್ಲಿ, ಶಿಬಿರ ಮತ್ತು ಇತರ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೇರುತ್ತಿದ್ದು, ನಾವು ಅವರನ್ನು ತಲುಪಲು ಪ್ರಯತ್ನಿಸಿದ್ದೆವೆ. ನಗರದ ಹೆಚ್ಚಿನ ಮಕ್ಕಳಿಗೆ ಈ ಸಂದೇಶ ತಲುಪಲು ನಾವು ಪ್ರಯತ್ನಿಸುತ್ತಿದ್ದೇವೆ. ಸರ್ಕಾರಿ ಶಾಲಾ ಪ್ರಾಧಿಕಾರಗಳಲ್ಲಿ ನಾವು ಮನವಿ ಮಾಡಿದ್ದೇವೆ ಮತ್ತು ಅವರು ಈ ನಿಟ್ಟಿನಲ್ಲಿ ಮುಂದುವರಿಯಲಿದ್ದಾರೆ. ಪೋದಾರ್ ಶಾಲಾ ಮಕ್ಕಳ ಸಹಾಯದೊಂದಿಗೆ ಪ್ರತಿ ವಾರಾಂತ್ಯದಲ್ಲಿ ತಪ್ಪದೆ ಅಪಾರ್ಟುಮೆಂಟಿನಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ.

ದೇಶದಲ್ಲಿ ನಡೆಯುತ್ತಿರುವ ದುಷ್ಕøತ್ಯಗಳಿಂದ ನಾವು ಆಕ್ರೋಶಿತರಾಗಿದ್ದೇವೆ, ಆದರೆ ಅಸಹಾಯಕರಾಗಿದ್ದೇವೆ. ಇಂತಹ ದೌರ್ಜನ್ಯಗಳನ್ನು ನೋಡುತ್ತಾ ಬಿಟ್ಟುಬಿಡುವುದು ಕೂಡ ಸಾಧ್ಯವಿಲ್ಲ. ಹಾಗಾಗಿ ಶಾಲಾ ಆಡಳಿತ ಮಂಡಳಿ ಈ ಚಿಂತನೆಗೆ ಬಂದಿದೆ ಎಂದು ರಾಜು ಹೇಳಿದ್ದಾರೆ.

LEAVE A REPLY