ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನೋಟ್ಸ್ ಆ್ಯಪ್ ರೆಡಿ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಿಟ್ಟೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್ 5ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಇಂಜಿನಿಯರಿಂಗ್ ನೋಟ್ಸುಗಳ ಮೊಬೈಲ್ ಆ್ಯಪ್ ತಯಾರಿಸಿದ್ದಾರೆ.

ಮೆಕ್ಯಾನಿಕಲ್, ಸಿವಿಲ್, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಆಂಡ್ ಇನ್ಫಾರ್ಮೇಶನ್ ವಿಭಾಗದ ನೋಟ್ಸುಗಳು ಈ ಆ್ಯಪಲ್ಲಿ ಲಭ್ಯವಾಗಲಿವೆ. ಪ್ರಸ್ತುತ ನಿಟ್ಟೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್ 5ನೇ ಸೆಮಿಸ್ಟರಿನಲ್ಲಿ ಓದುತ್ತಿರುವ ಮುಹಮ್ಮದ್ ಮುಬೀನ್ ಶೇಖ್ ಹಾಗೂ ಪ್ರಜ್ವಲ್ ಪಿ, ರಾಹುಲ್ ಆರ್ ಪೈ, ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಪೂಜಾ ಶೆಟ್ಟಿ, ವಿಶ್ವುಲ್ ಡಿಸೈನರ್-ಇಲ್ಯುಸ್ಟ್ರೇಟರ್-ಟೈಪೆÇೀಗ್ರಾಫರ್-ಫೆÇೀಟೋಗ್ರಾಫರ್-ಲೇಖಕಿಯೂ ಆಗಿರುವ ದೀಪ್ತಿ ಪೈ, ಬೆಂಗಳೂರಿನ ಬಿ ಎಂ ಎಸ್ ಸಿ ಇ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ 5ನೇ ಸೆಮಿಸ್ಟರ್ ವಿದ್ಯಾರ್ಥಿ ಪ್ರಜ್ವಲ್ ಲಿಂಗದ್, ಅದೇ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ 5ನೆ ಸೆಮಿಸ್ಟರ್ ವಿದ್ಯಾರ್ಥಿನಿ ಶೀತಲ್ ಎಚ್ ಎಂ, ಬೆಂಗಳೂರಿನ ಬಿಎಂಎಸ್ ಕಾಲೇಜಿನ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ 3ನೇ ಸೆಮಿಸ್ಟರ್ ವಿದ್ಯಾರ್ಥಿನಿ ಅರ್ಪಿತಾ ಅಂಕಲಗಿ, ನಿಟ್ಟೆಯ ಇನ್ಫಾರ್ಮೇಶನ್ ಸಯನ್ಸ್ ಇಂಜಿನಿಯರಿಂಗ್ 3ನೇ ವರ್ಷದ ವಿದ್ಯಾರ್ಥಿನಿ ಸಾಧನಾ ಮಯ್ಯ ಸೇರಿ ಈ ಮೊಬೈಲ್ ಆಪನ್ನು ಎಂಟು ತಿಂಗಳ ಅವಧಿಯಲ್ಲಿ ತಯಾರಿಸಿದ್ದಾರೆ.

`ಇಂಜಿನೆರಾ’ ಹೆಸರಿನ ಇಂಜಿನಿಯರಿಂಗ್ ನೋಟ್ಸ್ ಈ ಮೊಬೈಲ್ ಆ್ಯಪ್ ಉಚಿತವಾಗಿದ್ದು, ಅಂಡ್ರಾಯ್ಡ್ ಫೆÇೀನ್ ಗೂಗಲ್ ಪ್ಲೇಸ್ಟೋರಿನಲ್ಲಿ ಒಂದು ಬಾರಿ ಡೌನ್ಲೋಡ್ ಮಾಡಿಕೊಂಡಲ್ಲಿ ಬಳಿಕ ಇದನ್ನು ತೆರೆಯಲು ಡಾಟಾದ ಅಗತ್ಯವಿಲ್ಲ. ಜನವರಿಯಿಂದ ಈ ಆ್ಯಪ್ ತಯಾರಿಯನ್ನು ಆರಂಭಿಸಿದ್ದು, ಒಂಬತ್ತು ಮಂದಿ ದಿನವೊಂದಕ್ಕೆ ತಲಾ 4 ಗಂಟೆಗಳಂತೆ ಕಾರ್ಯನಿರ್ವಹಿಸಿದ್ದಾರೆ.