ನೋಟು ರದ್ದತಿ ಜಗತ್ತಿನ ಅತೀ ದೊಡ್ಡ ಹಗರಣ : ಕಾಂಗ್ರೆಸ್

????????????????????????????????????

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : “ದೇಶದಲ್ಲಿ ನೋಟು ರದ್ದತಿ ಮಾಡಿರುವುದು ಜಗತ್ತಿನ ಅತೀ ದೊಡ್ಡ ಹಗರಣ. ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ಕಳ್ಳ ನೋಟು ದಂಧೆಯಲ್ಲಿ ಭಾಗಿಯಾಗಿದೆ ಎನ್ನುವುದಕ್ಕೆ ವಿಭಿನ್ನ ಗಾತ್ರದ ನೋಟುಗಳನ್ನು ಮುದ್ರಿಸಿರುವುದೇ ಪ್ರತ್ಯಕ್ಷ ಸಾಕ್ಷಿಯಾಗಿದೆ” ಎಂದು ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್ ಹೇಳಿದರು.

ಸುಂಕದ ಕಟ್ಟೆಯಲ್ಲಿ ಮೀಂಜ ಮಂಡಲ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

“ಯುಪಿಎ ಸರಕಾರ ಜಾರಿಗೆ ತಂದ ಯೋಜನೆಗಳನ್ನು ಉದ್ಘಾಟಿಸಿರುವುದು ಬಿಟ್ಟರೆ ನರೇಂದ್ರ ಮೋದಿಯವರು ಮೂರು ವರ್ಷ ವಿದೇಶ ಯಾತ್ರೆಗಳಲ್ಲಿ ಮೋಜುಮಸ್ತಿ ಮಾಡಿದ್ದೇ ಸಾಧನೆಯಾಗಿದೆ. ಬೃಹತ್ ಗಾತ್ರದ ಜಾಹೀರಾತು ಬೋರ್ಡು ಸ್ಥಾಪಿಸಿ 2 ಕೋಟಿ ಮಹಿಳೆಯರಿಗೆ ಗೌರವ ಸಂದಿದೆಯೆಂದು ತನ್ನ ಫೆÇೀಟೋ ಹಾಕಿ ಪ್ರಚಾರ ಗಿಟ್ಟಿಸುವ ಮೋದಿ, ಕೇವಲ ಪ್ರಚಾರಕ್ಕಾಗಿ ಕೋಟಿಗಟ್ಟಲೇ ಹಣ ವ್ಯಯಿಸಿದ್ದು ಬಿಟ್ಟರೆ ಯಾವ ಮಹಿಳೆಗೂ ಗೌರವ ಸಂದಾಯವಾಗಿಲ್ಲ” ಎಂದು ಅವರು ಆರೋಪಿಸಿದರು. ಈ ಸಂದರ್ಭ ನೇತಾರರ ಸಹಿತ ಹಲವಾರು ಮಂದಿ ಕಾರ್ಯಕರ್ತರು ಪಾಲ್ಗೊಂಡರು.