ಅಭಿವೃದ್ಧಿ ಯೋಜನೆ ಕಾಮಗಾರಿಯೆಂದು ವರ್ಷವಿಡೀ ಸಾರ್ವಜನಿಕರಿಗೆ ತೊಂದರೆ ಕೊಡುವುದು ಎಷ್ಟು ಸರಿ ?

ಕದ್ರಿ ಮಲ್ಲಿಕಟ್ಟೆ ಜಂಕ್ಷನಿನಲ್ಲಿ ಪೈಪ್ ಅಳವಡಿಕೆ, ರಸ್ತೆ ದುರಸ್ತಿ ಕಾಮಗಾರಿ ಎಂದು ಹಲವಾರು ದಿನಗಳು ಸಂದರೂ ಕೆಲಸ ಆಮೆಗತಿಯಲ್ಲಿ ಸಾಗಿ ಸಾರ್ವಜನಿಕರು ತುಂಬಾ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕೆಲಸ ಅರ್ಧಂಬರ್ಧವಾದಂತೆ ಕಾಣುತ್ತಿದೆ. ಇಂತಹ ಪ್ರಮುಖ ರಸ್ತೆಗಳಲ್ಲಿನ ಹೆಚ್ಚು ಜನಸಂದಣಿ, ವಾಹನ ಸಾಂದÀ್ರತೆ ಇರುವ ಸ್ಥಳಗಳಲ್ಲಿನ ಕಾಮಗಾರಿಗಳನ್ನು ರಾತ್ರಿ-ಹಗಲು ಮಾಡಿ, ಮುಗಿಸುವಂಥ ಏರ್ಪಾಡನ್ನು ಮನಪಾ ಮಾಡಬೇಕಾಗಿದೆ. ಅಭಿವೃದ್ಧಿ ಯೋಜನೆ ಕಾಮಗಾರಿಗಳೆಂದು ವರ್ಷವಿಡೀ ದೂಡಿ ಸಾರ್ವಜನಿಕರಿಗೆ ತೊಂದರೆ ನೀಡುವುದೇ ? ವಿದೇಶದಲ್ಲಿನ ರಸ್ತೆಗಳಲ್ಲಿನ ಕೆಲಸ ಮಾಡಲು, ಒಂದೆರಡು ವಾಹನಗಳಲ್ಲಿ ಕೆಲವು ಸಿಬ್ಬಂದಿ, ಯಂತ್ರ ಸಾಮಗ್ರಿಗಳೊಂದಿಗೆ ಬೆಳಿಗ್ಗೆ ಬಂದು ರಸ್ತೆ ಕೆಲಸ ಮಾಡಿ ಸಾಯಂಕಾಲದೊಳಗೆ ಹೆಚ್ಚೆಂದರೆ ಮರು ದಿವಸದೊಳಗೆ ಮಾಡಿ ಮುಗಿಸಿ ಹೊರಟೋಗುತ್ತಾರೆ. ಆದರೆ ಇಲ್ಲಿ ರಸ್ತೆ ಅಗೆದು, ರಸ್ತೆ ಕಡಿತ ಮಾಡಿ ಸುತ್ತಲೂ ಕಲ್ಲನ್ನಿಟ್ಟು ಅಥವಾ ಬ್ಯಾರಿಕೇಡ್ ಇಟ್ಟು ಹೋದವರು ಬಳಿಕ ಕೆಲಸ ಪೂರ್ತಿಗೊಳಿಸಲು ಬರುವುದು ಒಂದೆರಡು ವಾರಗಳ ನಂತರ. ಹೀಗಿರುವಾಗ ಕೆಲಸಗಳನ್ನು ಅನಗತ್ಯವಾಗಿ ವಿಳಂಬಿಸುವುದು ಸರಿಯಲ್ಲ. ಆದ್ದರಿಂದ ಇಲ್ಲಿನ ಕಾಮಗಾರಿಗಳನ್ನು ತಿಂಗಳುಗಟ್ಟಲೆ ದೂಡದೇ ಬೇಗನೆ ಮುಗಿಸಿ.

  • ಕೆ ಮಹೇಶ್ ಸಾಲ್ಯಾನ್, ಮಲ್ಲಿಕಟ್ಟೆ