ತೆರೆಯ ಮೇಲೆ ಬರ್ತಿದ್ದಾಳೆ `ನೂರ್’

ಬಾಲಿವುಡ್ ಬೋಲ್ಡ್ ನಟಿ, ಆಕ್ಷನ್ ಕ್ವೀನ್ ಸೋನಾಕ್ಷಿ ಸಿನ್ಹಾ ಅಭಿನಯದ ಸಿನಿಮಾ `ನೂರ್’ ಇಂದು ತೆರೆ ಕಾಣುತ್ತಿದೆ. ಈ ಸಿನಿಮಾ ಪಾಕಿಸ್ತಾನದ ಪತ್ರಕರ್ತೆ ಹಾಗೂ ಲೇಖಕಿ ಸಬ ಇಮ್ತಿಯಾಝ್ ಅವರ `ಕರಾಚಿ, ಯೂ ಆರ್ ಕಿಲ್ಲಿಂಗ್ ಮಿ’ ಎಂಬ ಇಂಗ್ಲಿಷ್ ಕಾದಂಬರಿ ಆಧರಿತವಾಗಿದೆ.  ಈಗಾಗಲೇ ಸಿನಿಮಾದ ಎರಡು ಟ್ರೈಲರ್ ಹೊರಬಿದ್ದಿದ್ದು ಸಿನಿರಸಿಕರಿಗೆ ಇಷ್ಟವಾಗಿದೆ. `ಅಕಿರ’ ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ಸೋನಾಕ್ಷಿ `ನೂರ್’ ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾಳೆ. ಕೆಲವು ದೃಶ್ಯಗಳಲ್ಲಿ ಸಿಕ್ಕಾಪಟ್ಟೆ ನಗು ತರಿಸುವ ಸೋನಾ ಇನ್ನು ಕೆಲವು ದೃಶ್ಯಗಳಲ್ಲಿ ಬಹಳ ಸೀರಿಯಸ್ಸಾಗಿ ಕಾಣಿಸುತ್ತಾಳೆ. ನಟನೆಯ ಜೊತೆಗೆ ಸೋನಾಕ್ಷಿ ಈ ಚಿತ್ರದಲ್ಲಿ ಟೈಟಲ್ ಸಾಂಗ್ ಹಾಡಿದ್ದಾಳೆ.

ಅಂದ ಹಾಗೆ ಸೆನ್ಸಾರ್ ಬೋರ್ಡಿನವರು ಚಿತ್ರದಲ್ಲಿಯ ಕೆಲವಾರು ಸೀನುಗಳಿಗೆ ಕತ್ತರಿ ಪ್ರಯೋಗ ಮಾಡಿದ್ದಾರೆ. ಕೆಲವು ಶಬ್ಧಗಳನ್ನು ಮ್ಯೂಟ್ ಮಾಡಲೂ ಹೇಳಿದ್ದಾರೆ. ಚಿತ್ರದಲ್ಲಿ ಉಪಯೋಗಿಸಿದ್ದ `ದಲಿತ್’, `ಬರ್ಕಾ ದತ್’ ಇನ್ನೂ ಕೆಲವು ಶಬ್ಧಗಳನ್ನು ಸಿನಿಮಾದಲ್ಲಿ ನಮಗೆ ಕೇಳಿಸಲಾಗುವುದಿಲ್ಲ.

ಸುನಿಲ್ ಸಿಪ್ಪಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಕನನ್ ಗಿಲ್, ಪೂರಬ್ ಕೊಹ್ಲಿ, ಶಿಬಾನಿ ದಾಂಡೇಕರ್ ಮೊದಲಾದವರು ಸೋನಾಕ್ಷಿ ಜೊತೆ ನಟಿಸಿದ್ದಾರೆ.