ಅಸೆಂಬ್ಲಿಯಲ್ಲಿ ಚುಟುಕಾಗಿ ಮಾತನಾಡುವವರಿಲ್ಲ

ವಿಧಾನಸಭೆ ಕಲಾಪ ವೀಕ್ಷಿಸಿದವರಿಗೆ ಮನವರಿಕೆಯಾಗುವ ಮುಖ್ಯ ಅಂಶ ಎಂದರೆ ಮುಖ್ಯಮಂತ್ರಿಯಿಂದ ಹಿಡಿದು ಸಾಮಾನ್ಯ ಶಾಸಕರವರೆಗೆ ಸಂಕ್ಷಿಪ್ತವಾಗಿ ಮಾತನಾಡಲು ಬರುವವರೇ ಇಲ್ಲ  ಅನೇಕರಿಗೆ ವಯಸ್ಸಿನ ಕಾರಣದಿಂದ ಮಾತು ನೆನಪು ಆಗುವುದಿಲ್ಲ  ಕಾಗದಗಳಿಗಾಗಿ ತಡಕಾಡುತ್ತಾರೆ  ಹೇಳಿದ್ದನ್ನೇ ಎರಡ್ಮೂರು ಬಾರಿ ಹೇಳಿ ಸಮಯ ತಿನ್ನುತ್ತಾರೆ  ಸದನದಲ್ಲಿ ನಿದ್ದೆಯಿಂದ ತೂಗಾಡುವವರೂ ಇದ್ದಾರೆ
ಮುಂದಿನ ವಿಧಾನಸಭೆಯಲ್ಲಿ ಅರವತ್ತು ಮೀರಿದವರ ಸಂಖ್ಯೆ ಕಡಿಮೆಯಾಗಬೇಕಾಗಿದೆ  ಚುನಾವಣೆಗೆ ನಿಲ್ಲುವ ಅಭ್ಯರ್ಥಿ ತನ್ನ ಕ್ಷೇತ್ರದ ಅಥವಾ ರಾಜ್ಯದ ಸಮಸ್ಯೆಗಳ ಬಗೆಗೆ ಬೇರೆಯವರು ಹೇಳಿದ್ದನ್ನು ಚುಟುಕಾಗಿ ಹೇಳುವ ಸಾಮಥ್ರ್ಯ ಹೊಂದಿರಬೇಕು  ಮತದಾರರು ಈಗಿನಿಂದಲೇ ಅದನ್ನು ಮನನ ಮಾಡಿಕೊಂಡರೆ ಮುಂದೆಯಾದರೂ ನಮ್ಮ ಪ್ರತಿನಿಧಿಗಳು ಉಪಯುಕ್ತರಾಗಬಹುದು. ಜಗತ್ತೇ ವೇಗವಾಗಿ ಓಡಾಡುತ್ತಿರುವಾಗ ವಿಶೇಷ ಸದನವೊಂದು ತಡವಾಗಿ ಆರಂಭವಾಗಿ ವ್ಯವಸ್ಥಿತವಾಗಿ ನಡೆಯದೆ  ಕೆಲವು ಸಾಲುಗಳ ನಿರ್ಣಯ ಸಂಜೆಯ ಹೊತ್ತಿಗೆ ಹೊರ ಬಂದರೆ ಸಭಾಪತಿಗಳನ್ನು ದೂಷಿಸುವಂತಿಲ್ಲ.

  • ಅವಿನಾಶ್ ಕಂಕನಾಡಿ, ಮಂಗಳೂರು